Select Your Language

Notifications

webdunia
webdunia
webdunia
webdunia

ಶಾಸಕ ಜಮೀರ್ ಪುತ್ರನ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್

ಶಾಸಕ ಜಮೀರ್ ಪುತ್ರನ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್
ಬೆಂಗಳೂರು , ಗುರುವಾರ, 18 ನವೆಂಬರ್ 2021 (09:00 IST)
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ‘ಬನಾರಸ್’ ಎನ್ನುವ ಸಿನಿಮಾ ಮೂಲಕ ಝೈದ್ ಸಿನಿ ರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಈ ಸಿನಿಮಾದ ಪೋಸ್ಟರ್ ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ಎದುರು ಅನಾವರಣಗೊಂಡಿದೆ. ಬಹುಭಾಷೆಗಳಲ್ಲಿ ಮೂಡಿಬರಲಿರುವ ಸಿನಿಮಾಗೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿದ್ದಾರೆ.

ಜಮೀರ್ ಅಹಮ್ಮದ್ ಅವರಿಗೆ ಆಪ್ತರಾಗಿರುವ ದರ್ಶನ್, ಝೈದ್ ಸಿನಿಮಾಗೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ್ದಾರೆ. ಬಹುಭಾಷೆಗಳಲ್ಲಿ ಮೂಡಿಬರುತ್ತಿರುವ ಬನಾರಸ್ ಪೋಸ್ಟರ್ ಭರವಸೆ ಮೂಡಿಸುತ್ತಿದೆ. ಖೈದ್ ಖಾನ್, ಜಯತೀರ್ಥ ಮತ್ತು ತಂಡಕ್ಕೆ ಶುಭವಾಗಲಿ ಎಂದು ದರ್ಶನ್ ವಿಶ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲವು ತಿರುವುಗಳನ್ನು ಪಡೆಯುತ್ತಿರುವ ಹಂಸಲೇಖ ಹೇಳಿಕೆ!