Select Your Language

Notifications

webdunia
webdunia
webdunia
webdunia

ಹಲವು ತಿರುವುಗಳನ್ನು ಪಡೆಯುತ್ತಿರುವ ಹಂಸಲೇಖ ಹೇಳಿಕೆ!

ಬಸವನಗುಡಿ
ಬೆಂಗಳೂರು , ಗುರುವಾರ, 18 ನವೆಂಬರ್ 2021 (08:01 IST)
ಬೆಂಗಳೂರು : ಪೇಜಾವರ ಶ್ರೀಗಳ ವಿರುದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅಕ್ಷೆಪಾರ್ಹ ಹೇಳಿಕೆ ವಿಚಾರ ಇದೀಗ ಬಹಳ ಸದ್ದು ಮಾಡುತ್ತಿದೆ.
ನಾದಬ್ರಹ್ಮ ಖ್ಯಾತಿಯ ಹಂಸಲೇಖ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರಲ್ಲಿ ಈ ಬಗ್ಗೆ ವಾದ- ಪ್ರತಿವಾದಗಳೂ ಕಾಣುತ್ತಿವೆ. ಈ ಮಧ್ಯೆ, ಇದೀಗ ಹಂಸಲೇಖ ವಿರುದ್ದ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ 295 ಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
 (ನವೆಂಬರ್ 17) ಸಂಜೆ ಪೇಜಾವರ ಶ್ರೀಗಳ ಭಕ್ತರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ ಪ್ರತ್ಯೇಕ ದೂರು ನೀಡಿದ್ದಾರೆ. ವರ್ಗ ವರ್ಗಗಳ ನಡುವೆ ದುರುದ್ದೇಶದಿಂದ, ದ್ವೇಷಭಾವನೆ ಉಂಟು ಮಾಡಿರುತ್ತಾರೆ. ಸಮಾಜದಲ್ಲಿ ಶಾಂತಿ ಭಂಗ ಮಾಡಿದ್ದಾರೆ. ಗುರುಗಳಿಗೆ ಕೇಡನ್ನು ಬಯಸುವ ಉದ್ದೇಶದಿಂದ, ಚಾರಿತ್ರ್ಯಕ್ಕೆ ಕಪ್ಪು ಚುಕ್ಕೆ ಇಡುವ ಉದ್ದೇಶದಿಂದ ಹಂಸಲೇಖ ಹೇಳಿಕೆ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.
ದೂರಿನ ಅನ್ವಯ FIR ದಾಖಲಿಸಿ ಬಸವನಗುಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ಶೀಘ್ರವೇ ಸಂಗೀತ ನಿರ್ದೇಶಕ ಹಂಸಲೇಖಗೆ ಬಸವನಗುಡಿ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಚಾರಣೆ ಹಾಜರಾಗುವಂತೆ ನೋಟಿಸ್ ಸಾಧ್ಯತೆ ಕಂಡುಬಂದಿದೆ.
‘ಪೇಜಾವರ ಶ್ರೀಗಳ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದು ತಪ್ಪು. ಅದಕ್ಕಾಗಿ ವಿದ್ಯಾಪೀಠ ಸರ್ಕಲ್ ಬಳಿ ಇರುವ ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಬಂದು ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು. ನಾಲ್ಕು ಗೋಡೆ ಮಧ್ಯೆ ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ’ ಎಂದು ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಕೃಷ್ಣ ಹೇಳಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಪೇಜಾವರ ಶ್ರೀಗಳ ಬೃಂದಾವನ ಮುಂದೆ ಹಂಸಲೇಖ ಕ್ಷಮೆ ಕೇಳಲು ಆಗ್ರಹ