Publish Date: Thu, 18 Mar 2021 (10:19 IST)
Updated Date: Thu, 18 Mar 2021 (10:21 IST)
ಬೆಂಗಳೂರು: ರಾಬರ್ಟ್ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದಾರೆ.
ಸಿನಿಮಾ ಯಶಸ್ವಿಯಾದ ಬಳಿಕ ದರ್ಶನ್ ದೇವರ ಆಶೀರ್ವಾದ ಪಡೆದಿದ್ದಾರೆ. ಮನಸ್ಸಿಗೆ ನೆಮ್ಮದಿ ಬೇಕಾಗಿತ್ತು. ಅದಕ್ಕಾಗಿ ರಾಯರ ದರ್ಶನಕ್ಕೆ ಬಂದಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
ಮಠದಲ್ಲಿ ದರ್ಶನ್ ಗೆ ಮಂತ್ರಾಲಯ ಶ್ರೀಗಳು ಶಾಲು ಹೊದೆಸಿ ಸನ್ಮಾನಿಸಿದರು. ಅಲ್ಲಿದ್ದವರು ದರ್ಶನ್ ಜೊತೆಗೆ ಸೆಲ್ಫೀ ತೆಗೆಸಿಕೊಂಡು ಖುಷಿಪಟ್ಟರು. ಪ್ರಾಣಿ ಪ್ರಿಯರಾದ ದರ್ಶನ್ ಅಲ್ಲಿನ ಗೋ ಶಾಲೆಗೆ ಭೇಟಿಯಿತ್ತರು. ಈ ವೇಳೆ ಸಿನಿಮಾ ಕುರಿತಾಗಿ ಮಾತನಾಡಲು ಅವರು ನಿರಾಕರಿಸಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದೇನೆ. ಉಳಿದಿದ್ದನ್ನು ಮುಂದೆ ಮಾತಾಡೋಣ ಎಂದಿದ್ದಾರೆ.