Select Your Language

Notifications

webdunia
webdunia
webdunia
webdunia

ಝೊಮೆಟೋ ಹುಡುಗನ ಬೆಂಬಲಕ್ಕೆ ಬಂದ ದುನಿಯಾ ವಿಜಯ್

ಝೊಮೆಟೋ ಕಾಮರಾಜ್
ಬೆಂಗಳೂರು , ಬುಧವಾರ, 17 ಮಾರ್ಚ್ 2021 (10:40 IST)
ಬೆಂಗಳೂರು: ಹಲ್ಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಝೊಮೆಟೋ ಡೆಲಿವರಿ ಬಾಯ್ ಕಾಮರಾಜ್ ಗೆ ನಟ ದುನಿಯಾ ವಿಜಯ್ ಬೆಂಬಲಕ್ಕೆ ಬಂದಿದ್ದಾರೆ.


ಕಾಮರಾಜ್ ಮೇಲೆ ಯುವತಿ ಸುಳ್ಳು ಕಂಪ್ಲೇಂಟ್ ಕೊಟ್ಟಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಅದರ ಜೊತೆಗೆ ಕಾಮರಾಜ್ ಯುವತಿ ಮೇಲೆ ಹಲ್ಲೆ ದೂರು ನೀಡಿದ್ದರು.

ಇದೀಗ ಕಾಮರಾಜ್ ಬೆಂಬಲಿಸಿರುವ ನಟ ದುನಿಯಾ ವಿಜಯ್ ‘ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲಾ ಇರುತ್ತೇವೆ. ಕಾಮರಾಜ್ ಪರವಾಗಿ ನಿಂತಿರುವ ರೂಪೇಶ್ ರಾಜಣ್ಣಗೆ ನನ್ನ ಅಭಿನಂಧನೆಗಳು’ ಎಂದು ವಿಜಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಜಮೀನು ವಿವಾದ ಅಂತ್ಯ