Publish Date: Wed, 17 Mar 2021 (10:11 IST)
Updated Date: Wed, 17 Mar 2021 (10:13 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ನವರಸನಾಯಕ ಜಗ್ಗೇಶ್ ಕೂಡಾ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜನ್ಮದಿನಕ್ಕೆ ತೋತಾಪುರಿ ಚಿತ್ರತಂಡ ಗಿಫ್ಟ್ ನೀಡಿದೆ.
ಜಗ್ಗೇಶ್ ಜನ್ಮದಿನ ಪ್ರಯುಕ್ತ ತೋತಾಪುರಿ ಚಿತ್ರತಂಡ ಸಿನಿಮಾದಲ್ಲಿ ಜಗ್ಗೇಶ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗಿಫ್ಟ್ ನೀಡಿದೆ. ವಿಜಯಪ್ರಸಾದ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೇ ಜಗ್ಗೇಶ್ ಚಿತ್ರೀಕರಣ ಪೂರ್ತಿ ಮಾಡಿಕೊಟ್ಟಿದ್ದರು.
ಇನ್ನು, ಪ್ರತೀ ಬಾರಿಯೂ ಜಗ್ಗೇಶ್ ತಮ್ಮ ಬರ್ತ್ ಡೇಗೆ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಮಂತ್ರಾಲಯಕ್ಕೆ ತೆರಳುತ್ತಾರೆ. ಆದರೆ ಈ ಬಾರಿ ಮಾತ್ರ ಆ ಸಂಪ್ರದಾಯ ಮುರಿದಿದ್ದಾರೆ. ಅಪ್ಪನ ಕಾಲವಾದ ಬಳಿಕ 8 ವರ್ಷಗಳ ಬಳಿಕ ಮನೆಯಲ್ಲೇ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೇನೆ. ಮನೆಗೆ ಬನ್ನಿ ಸಿಗುವೆ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.