ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಅಪ್ಪು ಬರ್ತ್ ಡೇ ದಿನ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಯುವರತ್ನ ತಂಡ ಖುಷಿ ಕೊಡಲು ಮುಂದಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮೊನ್ನೆ ಫೇಸ್ ಬುಕ್ ಲೈವ್ ಬಂದು ಈ ಬಾರಿ ನಾನು ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿದ್ದರು. ಅದರ ಜೊತೆಗೇ ಮಾರ್ಚ್ 20 ರಂದು ಯುವರತ್ನ ಪ್ರಿ ರಿಲೀಸ್ ಈವೆಂಟ್ ಕೂಡಾ ನಡೆಯಲ್ಲ ಎಂದು ಶಾಕಿಂಗ್ ಸುದ್ದಿ ಕೊಟ್ಟಿದ್ದರು.
ಇದೇ ಬೇಸರದಲ್ಲಿರುವ ಅಭಿಮಾನಿಗಳಿಗೆ ಖುಷಿ ಕೊಡಲು ಯುವರತ್ನ ತಂಡ ಇಂದು ತಮ್ಮ ಸಿನಿಮಾದ ಫೀಲ್ ದಿ ಪವರ್ ಹಾಡಿನ ವಿಡಿಯೋ ರಿಲೀಸ್ ಮಾಡಲಿದೆ. ಈ ಮೂಲಕ ಬೇಸರದಲ್ಲಿರುವ ಅಭಿಮಾನಿಗಳಿಗೆ ಖುಷಿ ಕೊಡಲು ಪ್ರಯತ್ನ ನಡೆಸಲಿದೆ.