Publish Date: Wed, 17 Mar 2021 (10:32 IST)
Updated Date: Wed, 17 Mar 2021 (10:34 IST)
ಬೆಂಗಳೂರು: ಹಾಸನದಲ್ಲಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದ ಫಾರ್ಮ್ ಹೌಸ್ ಗೆ ರಸ್ತೆ ನಿರ್ಮಿಸುವ ಕುರಿತಾಗಿ ಎದ್ದಿದ್ದ ವಿವಾದ ಸುಖಾಂತ್ಯಗೊಂಡಿದೆ.
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರದಲ್ಲಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ರಾಕಿ ಭಾಯ್ ತಂದೆ-ತಾಯಿ ಹಾಗೂ ಅವರ ಬೆಂಬಲಿಗರ ನಡುವೆ ಕೆಲವು ದಿನಗಳ ಹಿಂದೆ ವಾಗ್ವಾದವಾಗಿತ್ತು. ಈ ಸಂಬಂಧ ಯಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದೀಗ ಗ್ರಾಮದ ದೇವಾಲಯದಲ್ಲಿ ನಡೆದ ರಾಜೀ ಪಂಚಾಯ್ತಿಯಲ್ಲಿ ಎಲ್ಲವನ್ನೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗಿದೆ. ಯಶ್ ಇಲ್ಲಿ ಜಮೀನು ಖರೀದಿಸಿರುವುದು ನಮಗೆ ಹೆಮ್ಮೆಯ ವಿಚಾರ. ಸಂವಹನದ ಕೊರತೆಯಿಂದ ಇಷ್ಟೆಲ್ಲಾ ರದ್ದಾಂತವಾಗಿದೆ. ರಸ್ತೆ ನಿರ್ಮಾಣಕ್ಕೆ ಜಮೀನು ಕೊಟ್ಟು ಬಿಡಲು ಸಿದ್ಧ ಎಂದು ಗ್ರಾಮದ ಮುಖಂಡರು ಒಪ್ಪಿಗೆ ನೀಡಿದ್ದಾರೆ.
ಇನ್ನು, ಯಶ್ ಕೂಡಾ ರೈತರಿಗೆ ಅನುಕೂಲವಾಗುತ್ತದೆ ಎಂದಾದರೆ 10 ಎಕರೆ ಜಮೀನು ಕೊಡಲೂ ಸಿದ್ಧ ಎಂದಿದ್ದರು. ಅದರಂತೆ ಎಲ್ಲವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ.