Select Your Language

Notifications

webdunia
webdunia
webdunia
webdunia

ಜಗ್ಗೇಶ್ ಗೂ ಮರೆಯದೇ ಜನ್ಮದಿನಕ್ಕೆ ಶುಭಾಶಯ ಕೋರಿದ ದರ್ಶನ್

ಜಗ್ಗೇಶ್ ಗೂ ಮರೆಯದೇ ಜನ್ಮದಿನಕ್ಕೆ ಶುಭಾಶಯ ಕೋರಿದ ದರ್ಶನ್
ಬೆಂಗಳೂರು , ಬುಧವಾರ, 17 ಮಾರ್ಚ್ 2021 (10:51 IST)
ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಂದ ನಡೆದ ಕಹಿ ಘಟನೆಯನ್ನು ಮರೆತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನವರಸನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.


ಇತ್ತೀಚೆಗಷ್ಟೇ ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆಂದು ದರ್ಶನ್ ಅಭಿಮಾನಿಗಳು ಗರಂ ಆಗಿ ಜಗ್ಗೇಶ್ ಗೆ ಮುತ್ತಿಗೆ ಹಾಕಿದ್ದರು. ಇದು ದೊಡ್ಡ ವಿವಾದವಾಗಿತ್ತು. ಇದಕ್ಕೆ ದರ್ಶನ್ ಸ್ವತಃ ಕ್ಷಮೆಯನ್ನೂ ಕೇಳಿದ್ದರು.

ಇಂದು ಜಗ್ಗೇಶ್ ಜನ್ಮದಿನವಿದ್ದು, ಹಿಂದಿನ ಕಹಿ ಘಟನೆಯನ್ನು ಮರೆತು ಫೇಸ್ ಬುಕ್ ಮುಖಾಂತರ ಜಗ್ಗೇಶ್ ಗೆ ದರ್ಶನ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು, ಜಗ್ಗೇಶ್ ಜೊತೆಗೆ ಪುನೀತ್ ರಾಜಕುಮಾರ್ ಗೂ ದರ್ಶನ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಝೊಮೆಟೋ ಹುಡುಗನ ಬೆಂಬಲಕ್ಕೆ ಬಂದ ದುನಿಯಾ ವಿಜಯ್