ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಗೌಡ ನಡುವಿನ ವಿವಾದಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಮಾರಿದ ಆಸ್ತಿಯೇ ಕಾರಣವಂತೆ.
ಹೀಗಂತ ಖುದ್ದು ಉಮಾಪತಿ ಗೌಡ ನೀಡಿದ ಹೇಳಿಕೆ ದರ್ಶನ್ ಅಸಮಾಧಾನಕ್ಕೆ ಕಾರಣವಾಗಿದೆ. ಉಮಾಪತಿ ಗೌಡ, ಹಿಂದೆ ರೆಸಿಡೆನ್ಸಿ ರಸ್ತೆಯಲ್ಲಿರುವ ಆಸ್ತಿಯೊಂದನ್ನು ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ರಿಂದ ಖರೀದಿ ಮಾಡಿದ್ದರು.
ಇದೇ ಆಸ್ತಿಯನ್ನು ದರ್ಶನ್ ತಮಗೆ ನೀಡುವಂತೆ ಉಮಾಪತಿ ಗೌಡಗೆ ಕೇಳಿದ್ದರು. ಆದರೆ ಉಮಾಪತಿ ಗೌಡ ನಿರಾಕರಿಸಿದ್ದರು ಎಂದು ಉಮಾಪತಿ ಗೌಡ ಹೇಳಿಕೆ ನೀಡಿದ್ದರು. ಇದು ದರ್ಶನ್ ಆಕ್ರೋಶಕ್ಕೆ ಕಾರಣವಾಯಿತು. ನನ್ನ ಕೈಲಿ ದುಡ್ಡು ನಿಲ್ಲಲ್ಲ. ಅದಕ್ಕೆ ಯಾವುದಾದ್ರೂ ಜಮೀನು ಇದ್ರೆ ಹೇಳು ಎಂದಿದ್ದೆ. ಆಗ ಅವನೇ ನನಗೆ ದೊಡ್ಮನೆಯವರು ನೀಡಿದ್ದ ಆಸ್ತಿ ಬಗ್ಗೆ ಹೇಳಿದ್ದ. ಅದರಲ್ಲಿ ನಂದೇನಿದೆ? ಎಂದು ಮಾಧ್ಯಮಗಳ ಮುಂದೆ ದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.