Publish Date: Sat, 17 Jul 2021 (09:59 IST)
Updated Date: Sat, 17 Jul 2021 (10:00 IST)
ಬೆಂಗಳೂರು: ಮೈಸೂರಿನ ಹೋಟೆಲ್ ರದ್ದಾಂತಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ನಟ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ.
ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ದರ್ಶನ್ ಹೋಟೆಲ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ದೂರಿದ್ದಾರೆ. ಆದರೆ ಈ ಬಗ್ಗೆ ದರ್ಶನ್ ಗೆ ಆತ್ಮೀಯರಾಗಿರುವ ನಟ, ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ಬಹಳ ಮುಗ್ಧ, ಸರಳ ಹಾಗೂ ಹೃದಯವಂತ ಹುಡುಗ. ಕೆಳ ಹಂತದಿಂದ ಬೆಳೆದು ಬಂದವರು. ಅವರ ಏಳಿಗೆ ಸಹಿಸದೇ ದುರುದ್ದೇಶದಿಂದ ಅಪಪ್ರಚಾರ ಮಾಡಿರಬಹುದು. ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.