Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅವರಪ್ಪನಿಗೆ ಹುಟ್ಟಿದ್ದರೇ ನನ್ನ ಆಡಿಯೋ ರಿಲೀಸ್ ಮಾಡು: ಇಂದ್ರಜಿತ್ ಗೆ ದರ್ಶನ್ ಚಾಲೆಂಜ್!

webdunia
ಶನಿವಾರ, 17 ಜುಲೈ 2021 (19:57 IST)
ಅವರಪ್ಪನಿಗೆ ಹುಟ್ಟಿದ್ದರೆ, ನಿಜವಾಗಿಯೂ ಗಂಡಸಾಗಿದ್ದರೆ ನಾನು ಮಾತನಾಡಿರುವ ಆಡಿಯೋ ಕ್ಲಿಪ್ ಅನ್ನು ಸಂಜೆಯೊಳಗೆ ಬಿಡುಗಡೆ ಮಾಡಲಿ ಎಂದು ನಿರ್ದೇಶಕ ಇಂದ್ರಜೀತ್ ಲಂಕೇಶ್ ಗೆ ಚಾಲೇಂಜಿಂಗ್ ಸ್ಟಾರ್ ದರ್ಶನ್ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 25 ಕೋಟಿ ವಂಚನೆ ಪ್ರಕರಣ ಇದೀಗ ಎಲ್ಲೇಲ್ಲಿಗೋ ತಿರುಗುತ್ತಿದೆ. ಇಂದ್ರಜಿತ್ ಲಂಕೇಶ್ ಗಾಂಡೂಗಿರಿ ನಡೆಯಲ್ಲ ಎಂದು ಹೇಳಿದ್ದಾರೆ. ಅವರಿಗೆ ನಾನು ಕೇಳ್ತಿದ್ದೀನಿ ನಿಮ್ಮಪ್ಪನಿಗೆ ಹುಟ್ಟಿದ್ದರೆ ನಾನು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಿ ಎಂದರು.
25 ಕೋಟಿ ರೂ. ವಂಚನೆ ಪ್ರಕರಣ ದಿನಕ್ಕೊಂದು ಕಡೆ ತಿರುಗುತ್ತಿದೆ. ಹಲ್ಲೆ ಪ್ರಕರಣ ಅಂದರು, ಇದೀಗ ದೊಡ್ಡಮನೆವರೆಗೂ ಬಂದಿದೆ. ಇದರ ಹಿಂದೆ ಷಡ್ಯಂತ್ರ ನಡೆಸುವವರಿಗೂ ತಿಳಿಯಲಿ ಎಂದು ಅವರು ಹೇಳಿದರು.
ಸಂದೇಶ್ ನಾಗರಾಜ್ ಜೊತೆ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಲಾಗಿದ್ದು, ಸಂದೇಶ್ ನಾಗರಾಜ್ ವಾಯ್ಸ್ ಅಲ್ಲ ಅಂತಿದ್ದಾರೆ. ಆದರೆ ಇಂದ್ರಜಿತ್ ನನ್ನದೇ ವಾಯ್ಸ್ ಎಂದು ಅವರು ಹೇಳಿದರು. ಇದೀಗ ನಾನೇ ಅವರ ಬಳಿ ಮಾತನಾಡಿರುವ ಆಡಿಯೋ ಕ್ಲಿಪ್ ಬಿಡುಗಡೆ ಮಾಡಲಿ ಎಂದು ಅವರು ಹೇಳಿದರು.
ಡಾ.ರಾಜ್ ಕುಮಾರ್ ಕುಟುಂಬದ ವಿಷಯದ ಯಾಕೆ ತೆಗೆದಿದ್ದು? ಅವರ ಕುಟುಂಬದಿಂದಲೇ ನಮ್ಮ ತಂದೆ ಬಂದಿದ್ದು, ನಾನು ಕೂಡ ಪೂರ್ಣಿಮಾ ಎಂಟರ್ ಪ್ರೈಸಸಸ್ ನ ಜನುಮದ ಜೋಡಿ ಚಿತ್ರದಲ್ಲಿ 175 ರೂ. ಸಂಬಳಕ್ಕೆ ಕೆಲಸ ಮಾಡಿದ್ದೇನೆ. ಅವರ ಹೆಸರು ತಂದಿದ್ದು ಸರಿಯಲ್ಲ ಎಂದು ದರ್ಶನ್ ನುಡಿದರು.
ಪುನೀತ್ ರಾಜ್ ಕುಮಾರ್ ಅರಸು ಚಿತ್ರದ ವೇಳೆ ಮಾರಿದ್ದರು. ನಿರ್ಮಾಪಕ ಉಮಾಪತಿ ಇದನ್ನು ಖರೀದಿಸಿದ್ದನ್ನು ನಾನು ನಾನು ಕೊಡುವ ಮನಸ್ಸಿದೆಯಾ ಎಂದು ಕೇಳಿದ್ದೆ. ಅಡ್ವಾನ್ಸ್ ನಿಮ್ಮ ಬಳಿಯೇ ಇದೆಯಲ್ಲಾ ತಗೊಳ್ಳಿ ಎಂದರು. ಈಗಲೂ ಅದಕ್ಕೆ ಒಂದೂವರೆ ವರ್ಷದಿಂದ ಬಾಡಿಗೆ ಕಟ್ಟುತ್ತಿದ್ದಾರೆ ಎಂದು ದರ್ಶನ್ ಹೇಳಿದರು.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭಾ ಸಚಿವಾಲಯದಲ್ಲಿ ಜೀನ್ಸ್-ಟಿ ಶರ್ಟ್ ನಿಷೇಧ; ತಕ್ಷಣದಿಂದ ಆದೇಶ ಜಾರಿ!