Publish Date: Sat, 17 Jul 2021 (17:22 IST)
Updated Date: Sat, 17 Jul 2021 (17:25 IST)
ಟೋಕಿಯೊ ಒಲಿಂಪಿಕ್ಸ್ ಗೆ ಕ್ಷಣಗಣನೆ ನಡೆದಿರುವ ಬೆನ್ನಲ್ಲೇ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಆದರೆ ಸೋಂಕು ಪತ್ತೆಯಾದ ಅಥ್ಲೀಟ್ ಹಾಗೂ ಅವರ ರಾಷ್ಟ್ರೀಯತೆ ಬಹಿರಂಗಪಡಿಸಲಾಗಿಲ್ಲ.
ಮುಂದಿನ ವಾರ ಒಲಿಂಪಿಕ್ಸ್ ಆರಂಭಗೊಳ್ಳುತ್ತಿದ್ದು, ಅಥ್ಲೀಟ್ ನಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಆದರೆ ಕ್ರೀಡಾಕೂಟ ಸೂಸುತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಟೋಕಿಯೊ ಒಲಿಂಪಿಕ್ ಸಂಘಟಕರು ತಿಳಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಒಂದು ವರ್ಷ ಮುಂದೂಡಿಕೆ ನಂತರ ಇದೀಗ ನಡೆಯಲು ಸಕಲ ಸಿದ್ಧತೆ ನಡೆದಿದೆ. ಅಲ್ಲದೇ ಈ ಬಾರಿ ಪ್ರೇಕ್ಷಕರಿಲ್ಲದೇ ಹಾಗೂ ಭಾರೀ ಭದ್ರತೆ ನಡುವೆ ನಡೆಯಲಿದ್ದು, ಗಣ್ಯರಿಗಷ್ಟೇ ಆಹ್ವಾನ ನೀಡಲಾಗುತ್ತಿದೆ.