Select Your Language

Notifications

webdunia
webdunia
webdunia
webdunia

ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

webdunia
bangalore , ಶನಿವಾರ, 17 ಜುಲೈ 2021 (17:20 IST)
ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ನಡೆದಿರುವ ಹಲ್ಲೆಯನ್ನ ಖಂಡಿಸಿ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಯಚೂರು ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ನಿನ್ನೆ ತಡರಾತ್ರಿ ರೋಗಿ ಸಂಬಂಧಿಕರು ವೈದ್ಯ ವಿದ್ಯಾರ್ಥಿ(ಇಂಟರ್ನಿ) ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ಹೀಗಾಗಿ ಹಲ್ಲೆಯನ್ನು ಖಂಡಿಸಿ ವಿದ್ಯಾರ್ಥಿಗಳು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ, ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇನ್ನೂ ನಿನ್ನೆ ರಾತ್ರಿ ವೇಳೆ ನರಸಿಂಹಲು ಚಿಕಿತ್ಸೆ ಕರೆ ತರಲಾಗಿತ್ತು. ಆದ್ರೆ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿ ರೋಗಿಯ ಹಿಂದೆ ಬಂದವರು ಹಲ್ಲೆ ನಡೆಸಿದ್ದರೆ ಎನ್ನಲಾಗುತ್ತದೆ. ಹಲ್ಲೆಯಿಂದ ವೈದ್ಯ ವಿದ್ಯಾರ್ಥಿಗಳಾದ ಸಂತೋಷ್ ಹಾಗೂ ರೋಹನ್ ಎಂಬುವವರಿಗೆ ಗಾಯಗೊಂಡಿದ್ದು, ಪ್ರತಿಭಟನೆ ಸ್ಥಳಕ್ಕೆ ರಿಮ್ಸ್ ಡೀನ್ ಆಗಮಿಸಿಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದ್ದರೆ. ಸ್ಥಳಕ್ಕೆ ಆಗಮಿಸಿದ ರಿಮ್ಸ್ ಡೀನ್, ಪ್ರತಿಭಟನಾಕಾರರ ಮನವೊಲಿಸಿ, ಅವರ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್!