Select Your Language

Notifications

webdunia
webdunia
webdunia
webdunia

ವಿಧಾನಸಭಾ ಸಚಿವಾಲಯದಲ್ಲಿ ಜೀನ್ಸ್-ಟಿ ಶರ್ಟ್ ನಿಷೇಧ; ತಕ್ಷಣದಿಂದ ಆದೇಶ ಜಾರಿ!

ವಿಧಾನಸಭಾ ಸಚಿವಾಲಯದಲ್ಲಿ ಜೀನ್ಸ್-ಟಿ ಶರ್ಟ್ ನಿಷೇಧ; ತಕ್ಷಣದಿಂದ ಆದೇಶ ಜಾರಿ!
ಉತ್ತರ ಪ್ರದೇಶ , ಶನಿವಾರ, 17 ಜುಲೈ 2021 (18:59 IST)
ಉತ್ತರ ಪ್ರದೇಶ(ಜು.17):  ವಿಧನಾಸಭಾ ಸಚಿವಾಲಯ ಕಚೇರಿ ಸಿಬ್ಬಂದಿ, ನೌಕರರಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಉತ್ತರ ಪ್ರದೇಶದ ವಿಧಾನಸಭಾ ಸಚಿವಾಲಯದ ನೌಕರರು, ಸಿಬ್ಬಂದಿಗಳು ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ. ಕರ್ತವ್ಯಕ್ಕೆ ಹಾಜರಾಗುವವರಿಗೆ ಜೀನ್ಸ್ ಹಾಗೂ ಟೀ ಶರ್ಟ್ ನಿಷೇಧಿಸಲಾಗಿದೆ.

 

•             ವಿಧಾನಸಭಾ ಸಚಿವಾಲಯದ ನೌಕರರು, ಸಿಬ್ಬಂದಿಗಳಿಗೆ ವಸ್ತ್ರಸಂಹಿತೆ
•             ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ
•             ಫಾರ್ಮಲ್ ಡ್ರೆಸ್ಗೆ ಮಾತ್ರ ಅವಕಾಶ, ಉತ್ತರ ಪ್ರದೇಶದಲ್ಲಿ ಮಹತ್ವದ ನಿರ್ಧಾರ ಜಾರಿ

ಸಿಬಿಐ ಸಿಬ್ಬಂದಿ ಇನ್ಮುಂದೆ ಜೀನ್ಸ್, ಟೀ ಶರ್ಟ್ ಧರಿಸುವಂತಿಲ್ಲ!
ನೂತನ ಆದೇಶವನ್ನು ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ್ ಮಿಶ್ರಾ ಹೊರಡಿಸಿದ್ದಾರೆ. ಉತ್ತರ ಪ್ರದೇಶ ಅಸೆಂಬ್ಲಿ ಸೆಕ್ರೆಟರಿಯಟ್ ಕಚೇರಿಯ ಘನತೆ ಕಾಪಾಡಿಕೊಳ್ಳಬೇಕು. ಹೀಗಾಗಿ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಹೋಗಿ ಸರಿ ಡ್ರೆಸ್ ಮಾಡ್ಕೊಂಡ್ ಬನ್ನಿ: ಟೈಟ್ ಪ್ಯಾಂಟ್ ಧರಿಸಿದ ಸಂಸದೆ ಸಂಸತ್ತಿನಿಂದ ಹೊರಕ್ಕೆ
ನೂತನ ಆದೇಶದ ಪ್ರಕಾರ ಜೀನ್, ಟೀ ಶರ್ಟ್ ಅಥವಾ ಕ್ಯಾಶ್ಯುಯೆಲ್ ಉಡುಗೆ ಧರಿಸಿ ಸಚಿವಾಲಯ ಪ್ರವೇಶಿಸುವಂತಿಲ್ಲ. ಈ ನಿಯಮ ಸಚಿವಾಲಯದ ಸಿಬ್ಬಂದಿಗಳು, ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳು ಸಿಬ್ಬಂದಿಗಳಲ್ಲಿ ಶಿಸ್ತು ಅಗತ್ಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಅತ್ಯಾಧುನಿಕ - MH-60R ಹೆಲಿಕಾಪ್ಟರ್ ನೀಡಿದ ಅಮೆರಿಕ