Select Your Language

Notifications

webdunia
webdunia
webdunia
webdunia

ನಟಿ ಜಯಪ್ರದಾಗೆ ಜೈಲು ಶಿಕ್ಷೆ ರದ್ದುಗೊಳಿಸಲು ನಿರಾಕರಿಸಿದ ಕೋರ್ಟ್

ನಟಿ ಜಯಪ್ರದಾಗೆ ಜೈಲು ಶಿಕ್ಷೆ ರದ್ದುಗೊಳಿಸಲು ನಿರಾಕರಿಸಿದ ಕೋರ್ಟ್
ಚೆನ್ನೈ , ಶನಿವಾರ, 21 ಅಕ್ಟೋಬರ್ 2023 (17:39 IST)
ಚೆನ್ನೈ: ಥಿಯೇಟರ್ ಕಾಂಪ್ಲೆಕ್ಸ್ ನ ನೌಕರರ ರಾಜ್ಯ ವಿಮೆ (ಇ.ಎಸ್.ಐ) ನಿಧಿಯ ಪಾಲನ್ನು ಪಾವತಿಸದೇ ಇರುವ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಜಯಪ್ರದಾಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರದಾಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸುವಂತೆ ಜಯಪ್ರದಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿದೆ. ಜಯಪ್ರದಾ ಮಾಲಿಕತ್ವದ ಎರಡು ಥಿಯೇಟರ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿದ್ದಲ್ಲದೆ, ಅದನ್ನು ಅವರ ಖಾತೆಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಜಯಪ್ರದಾ ವಿರುದ್ಧ ಲೇಬರ್ ಇನ್ಸುರೆನ್ಸ್ ಕಾರ್ಪೋರೇಷನ್ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಕಲೆಕ್ಷನ್ ದಾಟಿದ ಲಿಯೋ