Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ವಾರ್ ಗೆ ‘ಯುವ’ ಸಿನಿಮಾದಲ್ಲಿ ಸಖತ್ ಕೌಂಟರ್

Yuva

Krishnaveni K

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (16:25 IST)
ಬೆಂಗಳೂರು: ಡಾ.ರಾಜ್ ಕುಮಾರ್ ಮೊಮ್ಮಗ, ಯುವರಾಜ್ ಕುಮಾರ್ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಯುವ ಸಿನಿಮಾ ಇಂದು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.

ಈ ಸಿನಿಮಾ ನೋಡಿದ ವೀಕ್ಷಕರು ಕನ್ನಡ ಸಿನಿಮಾ ರಂಗಕ್ಕೆ ಮತ್ತೊಬ್ಬ ಸ್ಟಾರ್ ಹುಟ್ಟಿಕೊಂಡಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಸ್ ಡೈಲಾಗ್ ಗಳು, ಆಕ್ಷನ್, ಡ್ಯಾನ್ಸ್ ಎಲ್ಲದರಲ್ಲೂ ಯುವ ಅದ್ಭುತ ನಿರ್ವಹಣೆ ತೋರಿದ್ದಾರೆ. ಅಭಿನಯ ಎನ್ನುವುದು ಡಾ. ರಾಜ್ ಕುಟುಂಬದವರಿಗೆ ರಕ್ತಗತವಾಗಿ ಬಂದಿದೆ.

ಇದನ್ನು ಯುವ ರಾಜ್ ಕುಮಾರ್ ನಲ್ಲೂ ಕಾಣಬಹುದು. ಹೊಸಬ ಎಂದು ಕೊಂಚವೂ ಗೊತ್ತಾಗುವುದೇ ಇಲ್ಲ ಎ‍ನ್ನುವ ರೀತಿಯಲ್ಲಿ ಯುವ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ಸಾಕಷ್ಟು ಕೌಂಟರ್ ಡೈಲಾಗ್ ಗಳನ್ನು ನಾಯಕನ ಬಾಯಿಯಿಂದ ಹೇಳಿಸಲಾಗಿದೆ.

‘ಹೇಳೋರು ಕೇಳೋರು ಯಾರು ಇಲ್ಲ ಅಂತ ನೀವು ಆಡಿದ್ದೇ ಆಟ ಅಂದುಕೊಂಡ್ರಾ?’ ಎಂಬಿತ್ಯಾದಿ ಡೈಲಾಗ್ ಗಳನ್ನು ಹೇಳಿಸಲಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಸ್ಟಾರ್ ವಾರ್ ಗಳಿಗೆ ಚಿತ್ರದ ಮೊದಲಾರ್ಧದಲ್ಲಿ ಸಾಕಷ್ಟು ಕೌಂಟರ್ ಕೊಡಲಾಗಿದೆ. ಸಿನಿಮಾದ ದ್ವಿತೀಯಾರ್ಧದಲ್ಲಿ ಫ್ಯಾಮಿಲಿ ಡ್ರಾಮಾ, ತಂದೆ ಸೆಂಟಿಮೆಂಟ್ ಎಂದು ಪ್ರೇಕ್ಷಕರನ್ನು ಮನರಂಜಿಸಲು ಸಾಕಷ್ಟು ಅಂಶಗಳು ಸಿನಿಮಾದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ ವರ್ತೂರ್ ಸಂತೋಷ್