Select Your Language

Notifications

webdunia
webdunia
webdunia
webdunia

ತದ್ರೂಪಿನ ಮುಂದೆ ಫೋಟೋ ತೆಗೆಸಿಕೊಂಡ ಅಲ್ಲು ಅರ್ಜುನ್

Allu Arjun

Krishnaveni K

ದುಬೈ , ಶುಕ್ರವಾರ, 29 ಮಾರ್ಚ್ 2024 (12:21 IST)
Photo Courtesy: Twitter
ದುಬೈ: ಪುಷ್ಪ ಸಿನಿಮಾ ಬಳಿಕ ನಟ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಇದೀಗ ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅವರ ತದ್ರೂಪು ಮೇಣದ ಪ್ರತಿಮೆ ಸ್ಥಾಪಿಸಲಾಗಿದೆ.

ಖ್ಯಾತ ಸೆಲೆಬ್ರಿಟಿಗಳ ತದ್ರೂಪಿನ ಪ್ರತಿಮೆಗಳನ್ನು ಈ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಭಾರತದ ಹಲವು ತಾರೆಯರು ಇಲ್ಲಿ ಗೌರವ ಪಡೆದಿದ್ದಾರೆ. ಇದೀಗ ಅಲ್ಲು ಅರ್ಜುನ್ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ. ಇದೀಗ ಈ ಪ್ರತಿಮೆಯನ್ನು ಅಲ್ಲು ಅರ್ಜುನ್ ಅನಾವರಣಗೊಳಿಸಿದರು.

ಕೆಂಪು ಸೂಟ್ ಧರಿಸಿದ ಅಲ್ಲು ಅರ್ಜುನ್ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ವಿಶೇಷವೆಂದರೆ ಅನಾವರಣ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಕೂಡಾ ಅದೇ ರೀತಿ ಡ್ರೆಸ್ ಮಾಡಿಕೊಂಡು ಬಂದಿದ್ದರು. ಪ್ರತಿಮೆ ಮುಂದೆ ಅಲ್ಲು ಅರ್ಜುನ್ ಪೋಸ್ ಕೊಟ್ಟಾಗ ಇವರಲ್ಲಿ ಯಾರು ನಿಜವಾದ ಅಲ್ಲು ಅರ್ಜುನ್ ಎಂದು ಎಲ್ಲರೂ ಕನ್ ಫ್ಯೂಸ್ ಮಾಡುವಷ್ಟು ಸೇಮ್ ಟು ಸೇಮ್ ಕಾಣಿಸಿದ್ದಾರೆ.

ಪ್ರತಿಮೆ ಉದ್ಘಾಟನೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಲ್ಲು ಅರ್ಜುನ್ ‘ಇದು ನಿಜಕ್ಕೂ ವಿಶೇಷ ದಿನ. ನನ್ನ ಮೊದಲ ಸಿನಿಮಾ ಗಂಗೋತ್ರಿ ಬಿಡುಗಡೆಯಾದ ದಿನವಿಂದು. ಇಂದೇ ದುಬೈನಲ್ಲಿ ನನ್ನ ಪ್ರತಿಮೆ ಅನಾವರಣಗೊಳಿಸುತ್ತಿದ್ದೇನೆ. ಇದು 21 ವರ್ಷಗಳ ಅವಿಸ್ಮರಣೀಯ ಪಯಣ. ಈ ಪಯಣದಲ್ಲಿ ಜೊತೆಯಾದ ನನ್ನೆಲ್ಲಾ ಫ್ಯಾನ್ಸ್, ಸ್ನೇಹಿತರು, ಕುಟುಂಬದವರಿಗೆ ಧನ್ಯವಾದಗಳು’ ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ಸಹೋದರಿಯಾಗಲಿದ್ದಾರೆ ಕರೀನಾ ಕಪೂರ್