Select Your Language

Notifications

webdunia
webdunia
webdunia
webdunia

ನನ್ನ ತಂದೆಗೆ ನನ್ನ ಮೇಲಿದ್ದಿದ್ದು ಕಾಮ: ನಟಿ ಖುಷ್ಬೂ ಸುಂದರ್ ಶಾಕಿಂಗ್ ಹೇಳಿಕೆ

Khushboo

Krishnaveni K

ನವದೆಹಲಿ , ಶುಕ್ರವಾರ, 29 ಮಾರ್ಚ್ 2024 (10:36 IST)
ನವದೆಹಲಿ: ನಟಿ, ರಾಜಕಾರಣಿ ಖುಷ್ಬೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆಯೇ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಚಾರವೊಂದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಎಲ್ಲರಿಗೂ ತಂದೆಯೆಂದರೆ ಗೌರವ. ತಂದೆಗೂ ಮಕ್ಕಳ ಮೇಲೆ ಅಪಾರ ಪ್ರೀತಿಯಿರುತ್ತದೆ. ಆದರೆ ನನ್ನ ತಂದೆಗೆ ನನ್ನ ಮೇಲಿದ್ದಿದ್ದು ಬರೀ ಕಾಮ ಎಂದಿದ್ದಾರೆ. ಜೊತೆಗೆ ತಮ್ಮ ಬಾಲ್ಯದಲ್ಲಿ ತಂದೆಯಿಂದ ಅನುಭವಿಸಿದ ಕಿರುಕುಳ, ಹಿಂಸೆ ಬಗ್ಗೆ ಹೇಳಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ದೌರ್ಜನ್ಯ ನಡೆದರೆ ಮಕ್ಕಳು ಬೇಗ ಮರೆಯಲ್ಲ. ನನ್ನ ತಂದೆಯಿಂದ ನಾವು ಸಾಕಷ್ಟು ಹಿಂಸೆ ಅನುಭವಿಸಿದ್ದೇವೆ. ತಾಯಿಗೆ ಹೊಡೆಯುತ್ತಿದ್ದ. ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಹೇಳಿಕೊಂಡಿದ್ದಾರೆ. ಖುಷ್ಬೂ ಸಾಕಷ್ಟು ಬಾರಿ ತಮ್ಮ ತಂದೆಯ ದೌರ್ಜನ್ಯದ ಬಗ್ಗೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ತಂದೆಯಿಂದ ಆಗುತ್ತಿದ್ದ ದೌರ್ಜನ್ಯದ ಬಗ್ಗೆ ಹೇಳಿದರೂ ತಾಯಿ ನಂಬುತ್ತಿರಲಿಲ್ಲವಂತೆ. ಕೊನೆಗೆ ತಾವೇ ತಂದೆಯ ದೌರ್ಜನ್ಯದ ವಿರುದ್ಧ ಸಿಡಿದೆದ್ದರು. ಇದೀಗ ಖುಷ್ಬೂ ಮಹಿಳಾ ಆಯೋಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಹೆಣ್ಣು ಮಕ್ಕಳು ತಮಗೆ ಆಗುವ ಕಷ್ಟಗಳನ್ನು ತಮ್ಮಲ್ಲೇ ಇಟ್ಟುಕೊಂಡು ಕೊರಗಬಾರದು. ದೌರ್ಜನ್ಯದ ವಿರುದ್ಧ ಹೋರಾಡಬೇಕು ಎನ್ನುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆ ಹುಡುಗನ ಸಿನಿಮಾಗೆ ಭರ್ಜರಿ ಸ್ವಾಗತ: ಯುವ ಸಿನಿಮಾ ರಿಲೀಸ್