Select Your Language

Notifications

webdunia
webdunia
webdunia
webdunia

ದೊಡ್ಮನೆ ಹುಡುಗನ ಸಿನಿಮಾಗೆ ಭರ್ಜರಿ ಸ್ವಾಗತ: ಯುವ ಸಿನಿಮಾ ರಿಲೀಸ್

Yuva
Photo Courtesy: Twitter
ಬೆಂಗಳೂರು: ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಮೊದಲ ಬಾರಿಗೆ ಬಣ್ಣ ಹಚ್ಚಿರುವ ‘ಯುವ’ ಸಿನಿಮಾ ಇಂದು ಬಿಡುಗಡೆಯಾಗಿದೆ.

ದೊಡ್ಮನೆ ಹುಡುಗನ ಸಿನಿಮಾ ಎಂದರೆ ಕೇಳಬೇಕೇ? ಫಸ್ಟ್ ಡೇ ಫಸ್ಟ್ ಶೋಗೇ ಜನ ಥಿಯೇಟರ್ ಗೆ ನುಗ್ಗಿದ್ದಾರೆ. ನಿನ್ನೆ ರಾತ್ರಿಯಿಂದಲೇ ಯುವ ಸಿನಿಮಾದ ಸೆಲೆಬ್ರೇಷನ್ ಜೋರಾಗಿಯೇ ಶುರುವಾಗಿದೆ. ಥಿಯೇಟರ್ ಗಳಲ್ಲಿ ಯುವ ಕಟೌಟ್ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಹೊಂಬಾಳೆ ಫಿಲಂಸ್ ನಿರ್ಮಾಣದ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಯೂಥ್ ಫುಲ್ ಸ್ಟೋರಿ ಇರುವ ಸಿನಿಮಾವಿದು. ಹೀಗಾಗಿ ಯುವ ಜನಾಂಗ ಸಿನಿಮಾ ನೋಡಲು ಥಿಯೇಟರ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಅಲ್ಲದೆ ಪುನೀತ್ ರಾಜ್ ಕುಮಾರ್ ನಿಧನದ ನಂತರ ಯುವ ರಾಜ್ ಕುಮಾರ್ ನಲ್ಲಿ ದೊಡ್ಮನೆ ಅಭಿಮಾನಿಗಳು ತಮ್ಮ ಪ್ರೀತಿಯ ಅಪ್ಪುವನ್ನು ಕಾಣುತ್ತಿದ್ದಾರೆ. ಪುನೀತ್ ರಂತೇ ಯುವ ಕೂಡಾ ಮೊದಲ ಸಿನಿಮಾದಲ್ಲಿ ಭರ್ಜರಿ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಟ್ರೈಲರ್ ನೋಡುತ್ತಿದ್ದರೆ ಪುನೀತ್ ರನ್ನು ಮೀರಿಸುವಷ್ಟು ಅಲ್ಲದೇ ಹೋದರೂ ದೊಡ್ಮನೆ ಹೆಸರು ಉಳಿಸುವ ಪ್ರತಿಭೆ ಎಂದು ಅನಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

'ಯುವ' ನಾಳೆ ತೆರೆಗೆ: ಸಿನಿಮಾ ಯಶಸ್ವಿಗೆ ಅಭಿಮಾನಿಯಿಂದ ವಿಶೇಷ ಪೂಜೆ