Select Your Language

Notifications

webdunia
webdunia
webdunia
webdunia

ದೊಡ್ಮನೆ ಕುಡಿ ‘ಯುವ’ ಸಿನಿಮಾ ಟ್ರೈಲರ್ ನಾಳೆ: ಚಿಕ್ಕಪ್ಪ ಪುನೀತ್ ಮೀರಿಸ್ತಾರಾ ಯುವ

Yuvarajkumar
ಬೆಂಗಳೂರು: ದೊಡ್ಮನೆ ಕುಡಿ, ಯುವರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಯುವ ಸಿನಿಮಾದ ಟ್ರೈಲರ್ ನಾಳೆ ಲಾಂಚ್ ಆಗುತ್ತಿದೆ.

ಯುವ ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದೆ. ಡಾ. ರಾಜ್ ಕುಟುಂಬದ ಮತ್ತೊಬ್ಬ ಕುಡಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ದೊಡ್ಮನೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ.

ನಾಳೆ ಮಧ್ಯಾಹ್ನ 1.01 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಟ್ರೈಲರ್ ಲಾಂಚ್ ಆಗಲಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಒಂದು ಹಾಡು ಬಿಡುಗಡೆಯಾಗಿತ್ತು. ಹಾಡನ್ನು ಜನರ ಸಮ್ಮುಖದಲ್ಲೇ ಬಿಡುಗಡೆ ಮಾಡಲಾಗಿತ್ತು. ಇದೀಗ ಟ್ರೈಲರ್ ಲಾಂಚ್ ಗೆ ಮುಹೂರ್ತ ಕೂಡಿಬಂದಿದೆ.

ಪುನೀತ್ ರಾಜ್ ಕುಮಾರ್ ಸಾವಿನ ನಂತರ ದೊಡ್ಮನೆ ಅಭಿಮಾನಿಗಳು ಯುವರಾಜ್ ಕುಮಾರ್ ನಲ್ಲೇ ಅವರನ್ನು ಕಾಣುತ್ತಿದ್ದಾರೆ. ಇತ್ತೀಚೆಗೆ ಯುವ ಸಿನಿಮಾದ ಹಾಡಿನಲ್ಲೂ ಯುವ ಥೇಟ್ ಚಿಕ್ಕಪ್ಪನಂತೇ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದರು. ಹೀಗಾಗಿ ಯುವ ಸಿನಿಮಾದಲ್ಲಿ ಚಿಕ್ಕಪ್ಪನನ್ನೂ ಮೀರಿಸುವ ಪ್ರದರ್ಶನ ಯುವ ನೀಡುತ್ತಾರಾ ಕಾದು ನೋಡಬೇಕು. ಅಂದ ಹಾಗೆ ಈ ಸಿನಿಮಾ ಮಾರ್ಚ್ 29 ಕ್ಕೆ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಡೆವಿಲ್ ಸಿನಿಮಾ ಚಿತ್ರೀಕರಣಕ್ಕೆ ವಿಶೇಷ ಸೆಟ್