Select Your Language

Notifications

webdunia
webdunia
webdunia
webdunia

ಕಾಂತಾರ ಚಾಪ್ಟರ್ 1 ಯಶಸ್ಸಿಗಾಗಿ ದೈವದ ಮೊರೆ ಹೋದ ರಿಷಬ್ ಶೆಟ್ಟಿ

Rishab Shetty

Krishnaveni K

ಮಂಗಳೂರು , ಶನಿವಾರ, 6 ಜನವರಿ 2024 (12:17 IST)
File photo
ಮಂಗಳೂರು: ಕಾಂತಾರ ಚಾಪ್ಟರ್ 1 ಶೂಟಿಂಗ್ ಆರಂಭಕ್ಕೂ ಮುನ್ನ ನಟ, ನಿರ್ದೇಶಕ ರಿಷಬ್ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ.

ದೈವ, ಭೂತಕೋಲದ ಬಗ್ಗೆ ಕತೆ ಹೊಂದಿರುವ ಕಾಂತಾರ ಸಿನಿಮಾ ದೇಶದಾದ್ಯಂತ ಹೆಸರು ಮಾಡಿದ ಹಿನ್ನಲೆಯಲ್ಲಿ ರಿಷಬ್ ಇತ್ತೀಚೆಗೆ ಕಾಂತಾರ ಚಾಪ್ಟರ್ 1 ಸಿನಿಮಾ ಘೋಷಣೆ ಮಾಡಿದ್ದರು.

ಫಸ್ಟ್ ಲುಕ್ ನಲ್ಲಿ ಭೀಭತ್ಸ ಅವತಾರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮೊದಲು ರಿಲೀಸ್ ಆಗಿರುವ ಕಾಂತಾರ ಸಿನಿಮಾಗಿಂತ ಪೂರ್ವ ಕಾಲದ ಕತೆ ಹೇಳಲಾಗುತ್ತದೆ ಎಂದು ರಿಷಬ್ ಹೇಳಿದ್ದರು.

ಇದೇ ತಿಂಗಳು ಕೊನೆಯಲ್ಲಿ ಕಾಂತಾರ ಚಾಪ್ಟರ್ 1 ರ ಶೂಟಿಂಗ್ ಆರಂಭವಾಗುವ ಸಾಧ‍್ಯತೆಯಿದೆ. ಇದರ ಬೆನ್ನಲ್ಲೇ ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲದಲ್ಲಿ ರಿಷಬ್ ಭಾಗಿಯಾಗಿದ್ದು ಆಶೀರ್ವಾದ ಪಡೆದಿದ್ದಾರೆ. ವಜ್ರದೇಹಿ ಸ್ವಾಮೀಜಿ ಭೇಟಿ ಬಳಿಕ ದೈವದ ಕೋಲದಲ್ಲಿ ಅವರು ಭಾಗಿಯಾಗಿದ್ದಾರೆ. ಈ ವೇಳೆ ಧೈರ್ಯವಾಗಿ ಮುನ್ನುಗ್ಗು, ನಿನ್ನೆ ಹಿಂದೆ ನಾವಿರುತ್ತೇವೆ ಎಂದು ದೈವ ಆಶ್ವಾಸನೆ ಕೊಟ್ಟಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ UI ಸಿನಿಮಾ ಟೀಸರ್ ಲಾಂಚ್ ಮಾಡಲಿರುವ ಕಿಚ್ಚ ಸುದೀಪ್, ಶಿವಣ್ಣ