Select Your Language

Notifications

webdunia
webdunia
webdunia
webdunia

ತಾಯಿ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ ವರ್ತೂರ್ ಸಂತೋಷ್

Varthur Santhosh

Sampriya

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (16:00 IST)
photo Courtesy Instagram Varthur Santhosh
ಬೆಂಗಳೂರು: ನೇರವಾದ ಮಾತಿನಿಂದ ವಿರೋಧಿಗಳಿಗೆ ಕೌಂಟರ್ ನೀಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಬಿಗ್‌ಬಾಸ್‌ ಸ್ಪರ್ದಿ ವರ್ತೂರ್ ಸಂತೋಸ್ ಅವರು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.

ಬಿಗ್‌ಬಾಸ್‌ಗೆ ಹೋಗಿ ಬಂದ್ಮೇಲೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ವರ್ತೂರ್ ಸಂತೋಷ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ.  ಹೊಸ ವಿಡಿಯೋ ಒಂದರಲ್ಲಿ ಯಲಹಂಕ ಮಂಜು ನೀಡಿದ ಹೇಳಿಕೆ ಬಗ್ಗೆ ವರ್ತೂರ್ ಸಂತೋಷ್ ನೋವನ್ನು ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಅವರು,  ನಾನು ಯಾರಿಗೂ ಮೋಸ ಮಾಡಿದವನಲ್ಲ, ಯಾರ ಅನ್ನವನ್ನೂ ಕಿತ್ತುಕೊಂಡವನಲ್ಲ. ನನ್ನ ಮನೆಯ ಅನ್ನ ತಿಂದು, ನಾನು ಮಾಡಿದ ಸಾವಿರ, ಎರಡು ಸಾವಿರ ಹಣಕ್ಕೆ ಬರುತ್ತಿದ್ದ ಯಲಹಂಕ ಮಂಜು ಇಂದು ನನ್ನ ವಿರುದ್ಧ ಬಾಯಿಗೆ ಬಂದಂತೆ ಹೇಸಿಗೆ ಮಾತನಾಡುತ್ತಿದ್ದಾನೆ.

ನನ್ನ ತಾಯಿ, ನನ್ನ ಸ್ನೇಹಿತರು, ಬಂಧುಗಳ ಬಗ್ಗೆ, ನನ್ನ ಸಂಸಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಜನರು, ಧರ್ಮ ದೇವರುಗಳು, ನಾನು ಯಾರಿಗೂ ಮೋಸ ಮಾಡಿದವನಲ್ಲ, ನಾನು ಕಣ್ಣೀರು ಹಾಕಿದ್ರೆ ಡ್ರಾಮಾ ಅಂತ ಹೇಳ್ತಾರೆ.

ನಾನು ಯಾವ ಊರಿಗೂ ಹೋದರು ನನಗೆ ಮರ್ಯಾದೆ ಕೊಡುತ್ತಾರೆ.  ಮರ್ಯಾದೆಯಿಂದ ನಾವು ಬದುಕಿದ್ದೇವೆ. ನನ್ನ ತಂದೆ ತುಂಬ ಕಷ್ಟಪಟ್ಟಿದ್ದಾರೆ. ಆದರೆ ಅವರಿಗೆ ಇವರೆಲ್ಲ ಕೆಟ್ಟದಾಗಿ ಮಾತಾಡ್ತಾರೆ. ಇದನ್ನೆಲ್ಲ ಕೇಳಿ ನಮ್ಮ ತಾಯಿ ಊಟ ಮಾಡ್ತಿಲ್ಲ. ಜನರೇ ನನ್ನ ನಿಂದಕರಿಗೆ ಬುದ್ಧಿ ಕಲಿಸಬೇಕು ಎಂದು ಹೇಳುತ್ತಾ ವರ್ತೂರು ಸಂತೋಷ್​ ಕಣ್ಣೀರು ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತದ್ರೂಪಿನ ಮುಂದೆ ಫೋಟೋ ತೆಗೆಸಿಕೊಂಡ ಅಲ್ಲು ಅರ್ಜುನ್