Select Your Language

Notifications

webdunia
webdunia
webdunia
webdunia

Rakesh Poojari: ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿ ಸಾವು

Rakesh Poojari

Krishnaveni K

ಬೆಂಗಳೂರು , ಸೋಮವಾರ, 12 ಮೇ 2025 (07:55 IST)
Photo Credit: Instagram
ಬೆಂಗಳೂರು: ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಯುವ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಶಾಕಿಂಗ್ ಸುದ್ದಿ ಬಂದಿದೆ.

ಮಂಗಳೂರು ಮೂಲದ ರಾಕೇಶ್ ಪೂಜಾರಿ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಗಳಿಸಿದ್ದರು. ಬಳಿಕ ಅನೇಕ ಶೋ, ರಂಗಭೂಮಿ ಮೂಲಕ ಜನರ ಮನಸ್ಸು ಗೆದ್ದಿದ್ದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೆಹಂದಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಹೃದಯಾಘಾತಕ್ಕೆ ಒಳಗಾದ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. 2018 ರ ಕಾಮಿಡಿ ಕಿಲಾಡಿಗಳು ಶೋನ ರನ್ನರ್ ಅಪ್ ಆಗಿದ್ದರು ರಾಕೇಶ್. ಇದೀಗ ಅವರ ನಿಧನಕ್ಕೆ ಅಭಿಮಾನಿಗಳು, ಸಹಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ