ಬೆಂಗಳೂರು: ರಿಯಾಲಿಟಿ ಶೋ ಒಂದರಲ್ಲಿ ನಾಡದೇವತೆ ಚಾಮುಂಡಿ ತಾಯಿಗೆ ಅವಮಾನ ಮಾಡುವಂತಹ ಡೈಲಾಗ್ ಹೇಳಿದ್ದಕ್ಕೆ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದ ರಕ್ಷಕ್ ಬುಲೆಟ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ರಕ್ಷಕ್ ಬುಲೆಟ್ ಕ್ಷಮೆ ಕೇಳಬೇಕು. ಚಾಮುಂಡಿ ತಾಯಿಗೆ ತಪ್ಪು ಕಾಣಿಕೆ ಹಾಕಬೇಕು. ಇಲ್ಲದೇ ಹೋದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಪೊಲೀಸ್ ಆಯುಕ್ತರಿಗೆ ದೂರು ನೀಡಲೂ ಮುಂದಾಗಿದ್ದರು.
ಇದೀಗ ತಮ್ಮ ತಪ್ಪಿನ ಅರಿವಾಗುತ್ತಿದ್ದಂತೇ ರಕ್ಷಕ್ ಬುಲೆಟ್ ಕ್ಷಮೆ ಯಾಚಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗು ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ತನ್ನ ಜೊತೆಗಾತಿಯನ್ನು ಹೊಗಳುವ ಭರದಲ್ಲಿ ನಾಡದೇವತೆ ಚಾಮುಂಡಿ ತಾಯಿಯೇ ಓಲೆ, ಆಭರಣ, ಸೀರೆ ಬಿಚ್ಚಿ ಬಂದಂತಿದ್ದೀಯಾ ಎಂದಿದ್ದರು.
ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ವಿವಾದದ ಬೆನ್ನಲ್ಲೇ ಕ್ಷಮೆ ಯಾಚಿಸಿದ ರಕ್ಷಕ್ ಬುಲೆಟ್ ಯಾರಿಗಾದರೂ ನನ್ನ ಮಾತಿನಿಂದ ಬೇಸರವಾದಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯವಾಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.