ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಕಾರು ಅಪಘಾತಕ್ಕೀಡಾಗಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕಾರು ಅಪಘಾತವಾಗಿದ್ದು ಹೇಗೆ ಇಲ್ಲಿದೆ ಡೀಟೈಲ್ಸ್.
ಐಶ್ವರ್ಯಾ ರೈಗೆ ಸೇರಿದ ಐಷಾರಾಮಿ ಕಾರು ಮುಂಬೈನಲ್ಲಿ ಜನನಿಬಿಡ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ. ಕಾರಿಗೆ ಹಿಂದಿನಿಂದ ಬಸ್ ಗುದ್ದಿದೆ. ಅದು ಐಶ್ವರ್ಯಾ ರೈ ಕಾರು ಎಂದು ತಿಳಿಯುತ್ತಿದ್ದಂತೇ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು.
ಆದರೆ ಅಪಘಾತದ ವೇಳೆ ಐಶ್ವರ್ಯಾ ಕಾರಿನಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಐಶ್ವರ್ಯಾ ಕಾರು ಎಂದು ತಿಳಿಯುತ್ತಿದ್ದಂತೇ ಸಾಕಷ್ಟು ಜನ ಕುತೂಹಲದಿಂದ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಐಶ್ವರ್ಯಾ ಕಾರಿನಲ್ಲಿದ್ದರೇ ಎಂದು ತಿಳಿಯುವ ಪ್ರಯತ್ನ ಮಾಡಿದ್ದಾರೆ.
ಇನ್ನೊಂದೆಡೆ ತಕ್ಷಣವೇ ಬಾಡಿ ಗಾರ್ಡ್ ಗಳು ಕಾರು ಮುಂದೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಕಾರು ಅಲ್ಲಿಂದ ತೆರಳಿದೆ. ಆದರೆ ಐಶ್ವರ್ಯಾ ಕಾರು ಅಪಘಾತಕ್ಕೀಡಾಗಿದೆ ಎಂದು ತಿಳಿದ ತಕ್ಷಣ ಸಾಕಷ್ಟು ಜನ ಆತಂಕಕ್ಕೀಡಾಗಿದ್ದು ನಿಜ.