Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಹೊರಗೊಂದು, ಒಳಗೊಂದು: ಸಾಕ್ಷಿಯಾದ ಫೋಟೋ

Aishwarya Rai-Abhishek Bacchan

Krishnaveni K

ಮುಂಬೈ , ಸೋಮವಾರ, 15 ಜುಲೈ 2024 (16:21 IST)
Photo Credit: Facebook
ಮುಂಬೈ: ಇತ್ತೀಚೆಗೆ ಅನಂತ್ ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಎರಡು ಫೋಟೋಗಳು ಹೆಚ್ಚು ಸದ್ದು ಮಾಡಿವೆ. ಇದನ್ನು ನೋಡಿದರೆ ದಂಪತಿ ಒಳಗೊಂದು, ಹೊರಗೊಂದು ರೀತಿ ಇದ್ದಾರಾ ಎಂಬ ಅನುಮಾನ ಕಾಡುತ್ತಿದೆ.

ಯಾಕೆಂದರೆ ಅಂಬಾನಿ ಮದುವೆ ಮೊದಲ ದಿನ ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಪ್ರತ್ಯೇಕವಾಗಿ ಪೋಸ್ ಕೊಟ್ಟಿದ್ದು ಅನೇಕ ಊಹಾಪೋಹಗಳಿವೆ ಕಾರಣವಾಗಿತ್ತು. ಅಭಿಷೇಕ್ ಬಚ್ಚನ್ ತಂದೆ-ತಾಯಿ, ಸಹೋದರಿ ಜೊತೆಗೆ ಬಂದು ಫೋಟೋಗೆ ಪೋಸ್ ಕೊಟ್ಟರೆ ಐಶ್ವರ್ಯಾ ಎರಡೂ ದಿನವೂ ಮಗಳೊಂದಿಗೆ ಪ್ರತ್ಯೇಕವಾಗಿ ಬಂದು ಫೋಟೋಗೆ ಪೋಸ್ ಕೊಟ್ಟಿದ್ದರು.

ಇದನ್ನು ನೋಡಿ ಅನೇಕರು ಅಭಿ-ಐಶ್ ನಡುವೆ ಬಿರುಕು ಮೂಡಿದೆ ಎಂದು ಮಾತನಾಡಿಕೊಂಡಿದ್ದರು. ನೆಟ್ಟಿಗರಂತೂ ಪತ್ನಿ-ಮಗಳನ್ನು ಏಕಾಂಗಿಯಾಗಿ ಬಿಟ್ಟು ತಾವು ತಂದೆ-ತಾಯಿ ಜೊತೆ ಪೋಸ್ ಕೊಟ್ಟಿದ್ದಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಈ ಚಂದಕ್ಕೆ ಮದುವೆ ಯಾಕೆ ಬೇಕಿತ್ತು ಎಂದಿದ್ದರು.

ಆದರೆ ಇದರ ನಡುವೆಯೇ ಅಂಬಾನಿ ಮದುವೆ ಮನೆಯೊಳಗಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ತಮ್ಮ ಮಗಳ ಜೊತೆಗೇ ಕೂತಿದ್ದಾರೆ. ಇನ್ನೊಂದು ಫೋಟೋದಲ್ಲಿ ಐಶ್ ಹಿಂದೆಯೇ ಅಭಿ ಕೂಡಾ ನಿಂತಿದ್ದಾರೆ. ಈ ಫೋಟೋಗಳನ್ನು ನೋಡಿ ನೆಟ್ಟಿಗರು ಈ ಜೋಡಿ ಒಳಗೊಂದು ರೀತಿ, ಹೊರಗೊಂದು ರೀತಿ ಇದ್ದಾರಾ ಎನ್ನುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಂತ್ ಅಂಬಾನಿ ಮದುವೆಗೆ ಆಹ್ವಾನವಿದ್ದರೂ ಕಿಚ್ಚ ಸುದೀಪ್ ಯಾಕೆ ಹೋಗಲಿಲ್ಲ, ಕಾರಣ ಬಯಲು