ಬೆಂಗಳೂರು: ರಿಯಾಲಿಟಿ ಶೋ ಒಂದರಲ್ಲಿ ನಾಡದೇವತೆ ಚಾಮುಂಡಿ ತಾಯಿಗೇ ಅವಮಾನ ಮಾಡಿದ ಆರೋಪಕ್ಕೊಳಗಾಗಿರುವ ನಟ ರಕ್ಷಕ್ ಬುಲೆಟ್ ವಿರುದ್ಧ ಹಿಂದೂಗಳು ಆಕ್ರೋಶಗೊಂಡಿದ್ದು, ದೂರು ದಾಖಲಾಗಿತ್ತು.
ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್ ದರ್ಶನ್ ಮತ್ತು ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವೊಂದನ್ನು ಇಟ್ಟುಕೊಂಡು ಸ್ಕಿಟ್ ಮಾಡಿದ್ದರು.
ಇದರಲ್ಲಿ ಹೀರೋಯಿನ್ ಹೊಗಳುವ ಭರದಲ್ಲಿ ಚಾಮುಂಡಿ ತಾಯಿಯನ್ನೇ ಅವಹೇಳನ ಮಾಡುವ ಡೈಲಾಗ್ ಹೊಡೆದಿದ್ದಾರೆ ಎಂಬುದು ಆರೋಪ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ.
ಚಾಮುಂಡಿ ತಾಯಿ ಒಡವೆ, ಸೀರೆ ಬಿಚ್ಚಿಟ್ಟು ಸ್ವಿಜರ್ ಲ್ಯಾಂಡ್ ನಲ್ಲಿ ಟೂರ್ ಮಾಡುತ್ತಿದ್ದಾರೆ ಎಂದು ಡೈಲಾಗ್ ಹೇಳುತ್ತಾರೆ. ಈ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ. ನಾಡದೇವತೆಯ ಬಗ್ಗೆ ಇಷ್ಟು ಹಗುರವಾದ ಡೈಲಾಗ್ ಹೇಳಿರುವ ರಕ್ಷಕ್ ವಿರುದ್ಧ ಹಿಂದೂ ಹೋರಾಟಗಾರರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ. ತಮ್ಮ ಡೈಲಾಗ್ ಗೆ ಕ್ಷಮೆ ಕೇಳುವಂತೆ ರಕ್ಷಕ್ ಗೂ ಆಗ್ರಹಿಸಿದ್ದಾರೆ.