ಬೆಂಗಳೂರು: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ಅವರು ಸಿನಿಮಾಗೆ ಕೆಲಸಗಳಿಗೆ ಬ್ರೇಕ್ ಹಾಕಿ ರಾಮ ನವಮಿಯಂದು ಭಾನುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಿರುಪತಿ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಗಿಣಿ ದ್ವಿವೇದಿ ಅವರು ಕೆಲ ಕಾಲ ತಿರುಪತಿ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ನಂತರದ ಸಮೀಪದ ಶ್ರೀಕಾಳಹಸ್ತಿ ಮತ್ತು ಪದ್ಮಾವತಿ ದೇವಸ್ಥಾನಕ್ಕೂ ಅವರು ತೆರಳಿ ಪೂಜೆ ಸಲ್ಲಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ನಂದಕಿಶೋರ್ ಅವರು ಮೋಹನ್ ಲಾಲ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ವರ್ಷ ಅ.16ರಂದು ರಿಲೀಸ್ ಆಗಲಿದೆ. ಬಾಲಿವುಡ್, ತೆಲುಗು ಸಿನಿಮಾಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ.