Select Your Language

Notifications

webdunia
webdunia
webdunia
Thursday, 10 April 2025
webdunia

ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಶ್ರೀಲೀಲಾ: ತಿರುಪತಿ ತಿಮ್ಮಪ್ಪನ ದರ್ಶನ

Tirupati Thimmappa Temple

Sampriya

ಬೆಂಗಳೂರು , ಬುಧವಾರ, 26 ಜೂನ್ 2024 (14:39 IST)
Photo Courtesy X
ಬೆಂಗಳೂರು: ಕನ್ನಡದ ಶ್ರೀಲೀಲಾ ಇದೀಗ ಫುಲ್‌ ಬ್ಯೂಸಿ ಆಗಿದ್ದಾರೆ. ಟಾಲಿವುಡ್ ಬಳಿಕ ಬಾಲಿವುಡ್‌ನಲ್ಲೂ ಬಿಗ್ ಚಾನ್ಸ್ ಸಿಕ್ಕಿದೆ. ವರುಣ್ ಧವನ್ ಹೊಸ ಸಿನಿಮಾಗೆ ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಬೆನ್ನಲ್ಲೇ ಶ್ರೀಲೀಲಾ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಿರುಪತಿಗೆ ನಟಿ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

ಬಾಲಿವುಡ್‌ನಿಂದ ಉತ್ತಮ ಅವಕಾಶಗಳು ನಟಿಗೆ ಅರಸಿ ಬರುತ್ತಿವೆ. ಹಾಗಾಗಿ ತಾಯಿ ಸ್ವರ್ಣಲತಾ ಜೊತೆ ಶ್ರೀಲೀಲಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.  

ಶ್ರೀಲೀಲಾ ನಟಿಸಲಿರುವ ಬಾಲಿವುಡ್‌ ಚಿತ್ರ ಪಕ್ಕಾ ಕಾಮಿಡಿ ಡ್ರಾಮಾ ಸಿನಿಮಾ ಆಗಿದ್ದು, ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದಾರೆ. ಜುಲೈ ಕೊನೆಯಲ್ಲಿ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇನ್ನೂ ನಿತಿನ್ ಜೊತೆ ರಾಬಿನ್‌ಹುಡ್ ಸಿನಿಮಾ ಮಾಡುತ್ತಿರೋದು ಅಧಿಕೃತ ಘೋಷಣೆ ಆಗಿದೆ. ರವಿತೇಜ ಜೊತೆ ಸಿನಿಮಾಗೆ ಚಾಲನೆ ಸಿಕ್ಕಿದೆ. ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಕನ್ನಡದ ಜ್ಯೂನಿಯರ್ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ತಿದೆ ಚಿತ್ರತಂಡ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿಗೆ ಹೋದರೂ ದರ್ಶನ್ ಪತ್ನಿ, ಮಗನ ಜೊತೆ ಕಾಂಪಿಟೀಷನ್ ಬಿಡದ ಪವಿತ್ರಾ ಗೌಡ ಮಾಡಿದ್ದೇನು