Select Your Language

Notifications

webdunia
webdunia
webdunia
webdunia

ಜೈಲಿಗೆ ಹೋದರೂ ದರ್ಶನ್ ಪತ್ನಿ, ಮಗನ ಜೊತೆ ಕಾಂಪಿಟೀಷನ್ ಬಿಡದ ಪವಿತ್ರಾ ಗೌಡ ಮಾಡಿದ್ದೇನು

Pavithra Gowda

Krishnaveni K

ಬೆಂಗಳೂರು , ಬುಧವಾರ, 26 ಜೂನ್ 2024 (11:06 IST)
ಬೆಂಗಳೂರು: ಈ ಮೊದಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಬಟ್ಟೆ, ಆಭರಣ, ವಾಹನ ವಿಚಾರದಲ್ಲಿ ಪೈಪೋಟಿಗೆ ಬಿದ್ದಿದ್ದ ಪವಿತ್ರಾ ಗೌಡ ಈಗ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದರೂ ತನ್ನ ಪೈಪೋಟಿ ಮನೋಭಾವ ಬಿಟ್ಟಿಲ್ಲ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದು ಇತ್ತೀಚೆಗಷ್ಟೆ ಪೊಲೀಸ್ ಕಸ್ಟಡಿಯಿಂದ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಅದರಂತೆ ಸದ್ಯಕ್ಕೆ ಅವರು ಇತರೆ ಆರೋಪಿಗಳೊಂದಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಮೊನ್ನೆಯಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಬಂದು ಭೇಟಿ ಮಾಡಿಕೊಂಡು ಹೋಗಿದ್ದರು. ಪತ್ನಿ, ಪುತ್ರನನ್ನು ನೀಡಿದ ದರ್ಶನ್ ಭಾವುಕರಾದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಪವಿತ್ರಾ ಮನೆಗೆ ಕರೆ ಮಾಡಿ ನನ್ನನ್ನು ನೋಡಲು ಯಾರೂ ಬರುತ್ತಿಲ್ಲ ಯಾಕೆ ಎಂದು ಕೂಗಾಡಿದ್ದಾರಂತೆ.

ದರ್ಶನ್ ಗಿಂತ ಮೊದಲೇ ಪವಿತ್ರಾ ನ್ಯಾಯಾಂಗ ಬಂಧನಕ್ಕೀಡಾಗಿದ್ದರು. ಈ ನಡುವೆ ಒಮ್ಮೆ ಮಾತ್ರ ಅವರ ತಾಯಿ ಹಾಗೂ ಸಹೋದರ ನೋಡಲು ಬಂದಿದ್ದರು. ಆದರೆ ಮಗಳು ಇದುವರೆಗೆ ಬಂದಿರಲಿಲ್ಲ. ಇದೀಗ ದರ್ಶನ್ ಪುತ್ರ ಬಂದ ಬೆನ್ನಲ್ಲೇ ಮನೆಗೆ ಕರೆ ಮಾಡಿ ನನ್ನನ್ನು ನೋಡಲು ಯಾಕೆ ಬಂದಿಲ್ಲ ಎಂದು ಮನೆಗೆ ಕರೆ ಮಾಡಿ ಅತ್ತು ಕರೆದು ಮಗಳನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆಯಷ್ಟೇ ಮೊದಲ ಬಾರಿಗೆ ಪವಿತ್ರಾ ಮಗಳು ಖುಷಿ ತನ್ನ ಅಜ್ಜಿ ಜೊತೆ ಜೈಲಿಗೆ ಬಂದು ಅಮ್ಮನನ್ನು ನೋಡಿಕೊಂಡು ಹೋಗಿದ್ದಳು. ಇದನ್ನು ನೋಡಿ ಜೈಲಿಗೆ ಹೋದರೂ ಕಾಂಪಿಟೀಷನ್ ಬಿಟ್ಟಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಗೌಡಗೆ ಮೇಕಪ್ ಮಾಡಲು ಅನುವು ಮಾಡಿಕೊಟ್ಟ ಮಹಿಳಾ ಎಸ್ ಐಗೆ ನೋಟಿಸ್