Select Your Language

Notifications

webdunia
webdunia
webdunia
webdunia

ಪವಿತ್ರಾ ಗೌಡಗೆ ಮೇಕಪ್ ಮಾಡಲು ಅನುವು ಮಾಡಿಕೊಟ್ಟ ಮಹಿಳಾ ಎಸ್ ಐಗೆ ನೋಟಿಸ್

Pavithhra Gowda

Krishnaveni K

ಬೆಂಗಳೂರು , ಬುಧವಾರ, 26 ಜೂನ್ 2024 (10:27 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಕಸ್ಟಡಿಯಲ್ಲಿರುವಾಗಲೂ ಮೇಕಪ್ ನ ಚಿಂತೆ. ಮನೆಗೆ ಮಹಜರಿಗೆ ಬಂದಿದ್ದಾಗ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಈಗ ಮಹಿಳಾ ಪೊಲೀಸ್ ಅಧಿಕಾರಿಗೆ ಸಂಕಷ್ಟ ಎದುರಾಗಿದೆ.

ಇತ್ತೀಚೆಗೆ ಪೊಲೀಸರ ತಂಡ ಪವಿತ್ರಾ ಗೌಡರನ್ನು ಕರೆದುಕೊಂಡು ಅವರ ಮನೆಗೆ ಸ್ಥಳ ಮಹಜರು ಮಾಡಲು ಬಂದಿತ್ತು. ಈ ವೇಳೆ ಮನೆಯೊಳಗೆ ಹೋಗುವಾಗ ಪವಿತ್ರಾ ತುಟಿಗೆ ಲಿಪ್ ಸ್ಟಿಕ್ ಇರಲಿಲ್ಲ. ಸಾದಾ ಸೀದಾ ಆಗಿ ಹೋಗಿದ್ದರು. ಆದರೆ ಹೊರಗೆ ಬರುವಾಗ ಅವರು ತುಟಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡು ಮೇಕಪ್ ಮಾಡಿಕೊಂಡಿರುವುದು ಸ್ಪಷ್ಟವಾಗಿತ್ತು.

ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿತ್ತು. ಅಕ್ಕಂಗೆ ಪೊಲೀಸ್ ಕಸ್ಟಡಿಯಲ್ಲೂ ಮೇಕಪ್ ಚಿಂತೆ ಎಂದು ಹಲವರು ಟ್ರೋಲ್ ಮಾಡಿದ್ದರು. ಇದು ಹಿರಿಯರ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ಪವಿತ್ರಾಗೆ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದ ಎಸ್ ಐ ನೇತ್ರಾವತಿ ಎಂಬವರಿಗೆ ಈಗ ನೋಟಿಸ್ ನೀಡಲಾಗಿದೆ.

ಸ್ಥಳ ಮಹಜರಿಗೆ ಹೋದಾಗ ಪವಿತ್ರಾ ಜೊತೆಗಿದ್ದಿದ್ದು ಎಸ್ ಐ ನೇತ್ರಾವತಿ. ಕಸ್ಟಡಿಯಲ್ಲಿರುವಾಗ ಮೇಕಪ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಯಾಕೆ ಎಂದು ವಿವರಣೆ ಕೋರಿ ಈಗ ನೋಟಿಸ್ ನೀಡಲಾಗಿದೆ. ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಡಿಸಿಪಿಯವರು ವಿಜಯನಗರ ಠಾಣೆ ಎಸ್ ಐ ನೇತ್ರಾವತಿಗೆ ನೋಟಿಸ್ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಕೇಸ್ ಗೆ ಟ್ವಿಸ್ಟ್: ರೇಣುಕಾಸ್ವಾಮಿ ವಿರುದ್ಧ ಮತ್ತೊಬ್ಬ ನಟಿ ಆರೋಪ