Select Your Language

Notifications

webdunia
webdunia
webdunia
webdunia

ಪತ್ನಿ, ಪುತ್ರನ ಭೇಟಿ ಬಳಿಕ ಮತ್ತಷ್ಟು ಮಂಕಾದ ನಟ ದರ್ಶನ್

Darshan

Krishnaveni K

ಬೆಂಗಳೂರು , ಮಂಗಳವಾರ, 25 ಜೂನ್ 2024 (14:05 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೀಡಾಗಿರುವ ನಟ ದರ್ಶನ್ ಗೆ ಜೈಲು ವಾಸ ಅಸಹನೀಯವಾಗಿದೆ. ಜೊತೆಗೆ ಪತ್ನಿ, ಪುತ್ರ ಭೇಟಿಯಾದ ಬಳಿಕ ಮತ್ತಷ್ಟು ಮಂಕಾಗಿದ್ದಾರೆ.
 

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಲಾಕ್ ಆಗುವುದು ಬಹುತೇಕ ಖಚಿತವಾಗಿದೆ. ಇದೀಗ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ದರ್ಶನ್ ಮೊಬೈಲ್ ಪಡೆದು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.

ಕಳೆದ ಮೂರು ರಾತ್ರಿಗಳನ್ನು ಜೈಲಿನಲ್ಲಿ ಕಳೆದಿರುವ ದರ್ಶನ್ ಗೆ ಪ್ರಕರಣದಲ್ಲಿ ಸಾಕ್ಷ್ಯಗಳು ಬಲವಾಗಿರುವುದು ಹೈರಾಣಾಗಿಸಿದೆ. ಇದರಿಂದಾಗಿ ನಿದ್ರೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ಅದರಲ್ಲೂ ಜೈಲೂಟ ಸೇರದೇ ಯಾರೊಂದಿಗೂ ಏನೂ ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ.

ಈ ನಡುವೆ ನಿನ್ನೆ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೈಲಿಗೆ ಹೋಗಿದ್ದರು. ಈ ವೇಳೆ ಮಗನನ್ನು ನೋಡಿ ಅವರ ದುಃಖದ ಕಟ್ಟೆ ಒಡೆದಿತ್ತು ಎನ್ನಲಾಗಿದೆ. ಇಬ್ಬರೂ 15 ನಿಮಿಷಗಳ ಕಾಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ದರ್ಶನ್ ಮತ್ತಷ್ಟು ಮಂಕಾಗಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂದಾಪುರಕ್ಕೆ ಆಗಮಿಸಿದ 'ಕಲ್ಕಿ' ಕಾರು ಬುಜ್ಜಿ, ಓಡಿಸಿ ಖುಷಿ ಪಟ್ಟ ರಿಷಬ್ ಶೆಟ್ಟಿ