Select Your Language

Notifications

webdunia
webdunia
webdunia
webdunia

ಪುಷ್ಪ 2 ಗೆ ನೋ ಎಂದಿದ್ದ ಶ್ರೀಲೀಲಾ ದಳಪತಿ ವಿಜಯ್ ಗೋಟ್ ನಲ್ಲಿ ಐಟಂ ಡ್ಯಾನ್ಸ್ ಮಾಡಲು ಓಕೆ ಅಂದ್ರು

Sreeleela

Krishnaveni K

ಚೆನ್ನೈ , ಮಂಗಳವಾರ, 23 ಏಪ್ರಿಲ್ 2024 (16:57 IST)
ಚೆನ್ನೈ: ಕನ್ನಡ ಮೂಲದ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆಯನ್ನೇ ಸೈಡ್ ಲೈನ್ ಮಾಡುವಂತೆ ಬೆಳೆದಿದ್ದಾರೆ.

ಶ್ರೀಲೀಲಾ ಈಗ ತೆಲುಗಿನಿಂದ ತಮಿಳಿನತ್ತ ಹಾರಲಿದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್ ನಾಯಕರಾಗಿರುವ ಗೋಟ್ ಸಿನಿಮಾದಲ್ಲಿ ಶ್ರೀಲೀಲಾ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ.

ವಿಶೇಷವೆಂದರೆ ಇದೇ ಶ್ರೀಲೀಲಾ ಈ ಹಿಂದೆ ಪುಷ್ಪ 2 ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಲು ಆಫರ್ ಪಡೆದಿದ್ದರು. ಆದರೆ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಐಟಂ ಹಾಡಿಗೆ ಹೆಜ್ಜೆ ಹಾಕಿದರೆ ವೃತ್ತಿ ಜೀವನಕ್ಕೆ ತೊಂದರೆಯಾಗಬಹುದು ಎಂದು ಅವಕಾಶ ನಿರಾಕರಿಸಿದರು ಎಂಬ ಸುದ್ದಿಗಳಿತ್ತು.

ಆದರೆ ಪುಷ್ಪ 2 ನಲ್ಲಿ ಕುಣಿಯಲು ಒಲ್ಲೆ ಎಂದಿದ್ದ ಶ್ರೀಲೀಲಾ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಕುಣಿಯಲು ಅವಕಾಶ ಸಿಕ್ಕಾಗ ಖುಷಿಯಿಂದ ಒಪ್ಪಿಕೊಂಡಿರುವುದು ಅಚ್ಚರಿಯೇ ಸರಿ. ಸದ್ಯಕ್ಕೆ ಶ್ರೀಲೀಲಾಗೆ ತಮಿಳಿನಲ್ಲಿ ಚಾನ್ಸ್ ಸಿಕ್ಕಿಲ್ಲ. ಆದರೆ ವಿಜಯ್ ಸಿನಿಮಾ ಮೂಲಕ ತಮಿಳಿಗೆ ಪರಿಚಯವಾದರೆ ತಮ್ಮ ವೃತ್ತಿ ಜೀವನಕ್ಕೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ಈ ಆಫರ್ ಒಪ್ಪಿಕೊಳ್ಳುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತಾಭ್ ಬಚ್ಚನ್ ಗೆ ಖ್ಯಾತಿ ತಂದುಕೊಟ್ಟ ಕೂಲಿ ಟೈಟಲ್ ನಲ್ಲಿ ರಜನೀಕಾಂತ್ ಸಿನಿಮಾ