Select Your Language

Notifications

webdunia
webdunia
webdunia
webdunia

ಸೆ.5 ರಂದು ದಳಪತಿ ವಿಜಯ್ ನಟನೆಯ 'ದಿ ಗೇಟೆಸ್ಟ್ ಆಫ್ ಆಲ್‌ ಟೈಮ್' ಸಿನಿಮಾ ತೆರೆಗೆ

ಸೆ.5 ರಂದು ದಳಪತಿ ವಿಜಯ್ ನಟನೆಯ 'ದಿ ಗೇಟೆಸ್ಟ್ ಆಫ್ ಆಲ್‌ ಟೈಮ್' ಸಿನಿಮಾ ತೆರೆಗೆ

Sampriya

ಬೆಂಗಳೂರು , ಗುರುವಾರ, 11 ಏಪ್ರಿಲ್ 2024 (20:29 IST)
Photo Courtesy X
ಬೆಂಗಳೂರು: ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರ ಸೆಪ್ಟೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಸಿನಿಮಾಗೆ ವೆಂಕಟ ಪ್ರಭು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಯುವನ್ ಶಂಕರ್ ರಾಜಾ ಸಂಗೀತ ಹಾಗೂ ‌ಸಿದ್ಧಾರ್ಥ ನುನಿ ಕ್ಯಾಮಾರ ಕೈಚಳಕವಿದೆ.  ಚಿತ್ರದ ಬಿಡುಗಡೆ ಬಗ್ಗೆ ನಟ ವಿಜಯ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಸ್ನೇಹ, ಲೈಲಾ, ಮೀನಾಕ್ಷಿ ಚೌಧರಿ, ಮೋಹನ್, ಜಯರಾಮ್, ಅಜ್ಮಲ್ ಅಮೀರ್ ಮತ್ತು ಯೋಗಿ ಬಾಬು ಸೇರಿದ ದೊಡ್ಡ ತಾರಾ ಬಳಗವಿದೆ.

ಇನ್ನು ದಳಪತಿ ವಿಜಯ್ ಅವರು ಈಚೆಗೆ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.

ಇನ್ನು ಕೆಲ ದಿನಗಳ ಹಿಂದೆ ದಳಪತಿ ವಿಜಯ್ ಅವರು ತಮ್ಮ ತಾಯಿಗಾಗಿ ಸಾಯಿ ಬಾಬಾ ಮಂದಿರವನ್ನು ಕಟ್ಟಿ ಸುದ್ದಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಗಾಗಿ ಮಗಳ ಹೆಸರು ಬದಲಾಯಿಸಿದ ದುನಿಯಾ ವಿಜಯ್