Select Your Language

Notifications

webdunia
webdunia
webdunia
webdunia

ತಾಯಿಗಾಗಿ ಸಾಯಿ ಬಾಬಾ ದೇವಾಲಯ ಕಟ್ಟಿಸಿದ 'ದಳಪತಿ' ವಿಜಯ್

Vijay

Sampriya

ತಮಿಳುನಾಡು , ಬುಧವಾರ, 10 ಏಪ್ರಿಲ್ 2024 (19:32 IST)
Photo Courtesy Facebook
ತಮಿಳುನಾಡು:  ಯಶಸ್ವಿಯಾಗಿ ಸಿನಿಮಾರಂಗದಲ್ಲಿ ಮುನ್ನುಗ್ಗುತ್ತಿರುವ ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಷಯಕ್ಕೆ ಟ್ರೆಂಡಿಂಗ್‌ನಲ್ಲಿರುತ್ತಾರೆ. ಇನ್ನೂ ಈಚೆಗೆ ರಾಜಕೀಯ ಪ್ರವೇಶದ ಬಗ್ಗೆ ನಿರ್ಧಾರವನ್ನು ಪ್ರಕಟಿಸಿದ್ದ ವಿಜಯ್ ಈಚೆಗೆ ಸಾಯಿ ಬಾಬಾ ಮಂದಿರದಲ್ಲಿ ಪುರೋಹಿತರ ಮಧ್ಯೆ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

ಇದನ್ನು ನೋಡಿದ ನೆಟ್ಟಿಗರು ವಿಜಯ್ ಚಲನಚಿತ್ರಕ್ಕೆ ವಿದಾಯ ನೀಡಿ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬರಲಿದ್ದಾರೆಂದು ಹೇಳುತ್ತಿದ್ದಾರೆ. ಆದರೆ ಇದೀಗ ವೈರಲ್ ಫೋಟೋದ ಹಿಂದಿನ ಅಸಲಿ ವಿಚಾರ ತಿಳಿದುಬಂದಿದೆ.

ಈ ದೇವಾಲಯವು ತನ್ನ ತಾಯಿಗಾಗಿ ವಿಜಯ್ ಅವರು ಕಟ್ಟಿಸಿದ್ದಾರೆ. ಸಾಯಿ ಬಾಬಾರ ಭಕ್ತೆಯಾಗಿರುವ ವಿಜಯ್ ತಾಯಿ ಶೋಬಾ ಅವರಿಗಾಗಿ ತಮಿಳುನಾಡಿನ ಚೆನ್ನೈನ ಪಶ್ಚಿಮ ಭಾಗದಲ್ಲಿರುವ ಕೊರತ್ತೂರಿನಲ್ಲಿ ತನ್ನಒಡೆತನದ ಜಮೀನಿನಲ್ಲಿ ದೇವಾಲಯವನ್ನು ಕಟ್ಟಿಸಿದ್ದಾರೆ.

ಇನ್ನೂ ಈ ದೇವಾಲಯಕ್ಕೆ ಭೇಟಿ ಕೊಟ್ಟ ವೇಳೆ ತೆಗೆದ ಫೋಟೋ ಅಂತೆ ಕಂತೆ ಸುದ್ದಿಗಳನ್ನು ಸೃಷ್ಟಿ ಮಾಡಿದೆ.

ಚಲನಚಿತ್ರ ನಿರ್ಮಾಪಕ ಎಸ್‌ಎ ಚಂದ್ರಶೇಖರ್ ಮತ್ತು ನಿರ್ದೇಶಕಿ-ಹಿನ್ನೆಲೆ ಗಾಯಕಿ ಶೋಬಾ ಅವರಿಗೆ ಜನಿಸಿದ ವಿಜಯ್ ಅವರ ಕುಟುಂಬವು ವೈವಿಧ್ಯಮಯ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಅವರ ಪೋಷಕರು ಅಂತರ-ಧರ್ಮೀಯ ವಿವಾಹವನ್ನು ಹೊಂದಿದ್ದಾರೆ.  ಚಂದ್ರಶೇಖರ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಕುಟುಂಬದಿಂದ ಬಂದವರು ಮತ್ತು ಶೋಬಾ ಹಿಂದೂ.

Share this Story:

Follow Webdunia kannada

ಮುಂದಿನ ಸುದ್ದಿ

ಒಡಹುಟ್ಟಿದವರೊಂದಿಗಿನ ನೆನಪುಗಳು ಅಮೂಲ್ಯ ಎಂದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ