Select Your Language

Notifications

webdunia
webdunia
webdunia
webdunia

23 ವರ್ಷದ ಬಳಿಕ ಇಳಯರಾಜ ಜೊತೆ ಕೈಜೋಡಿಸಲಿದ್ದಾರಾ ದಳಪತಿ ವಿಜಯ್?

23 ವರ್ಷದ ಬಳಿಕ ಇಳಯರಾಜ ಜೊತೆ ಕೈಜೋಡಿಸಲಿದ್ದಾರಾ ದಳಪತಿ ವಿಜಯ್?
ಚೆನ್ನೈ , ಗುರುವಾರ, 4 ಜನವರಿ 2024 (11:18 IST)
ಚೆನ್ನೈ: ದಳಪತಿ ವಿಜಯ್ ಮತ್ತು ಸಂಗೀತ ಮಾಂತ್ರಿಕ ಇಳಯರಾಜ ಬರೋಬ್ಬರಿ 23 ವರ್ಷಗಳ ಬಳಿಕ ಸಿನಿಮಾಗಾಗಿ ಒಂದಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ವಿಜಯ್ ನಾಯಕರಾಗಿರುವ ‘ಗೋಟ್’ (ಗ್ರೇಟೆಸ್ಟ್ ಆಫ್ ಆಲ್ ಟೈಮ್) ಸಿನಿಮಾ ಘೋಷಣೆಯಾಗಿತ್ತು. ಈ ಸಿನಿಮಾಗೆ ಇಳಯರಾಜ ತಮ್ಮನ ಮಗ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ.

ಇದೀಗ ಈ ಸಿನಿಮಾಗೆ ಇಳಯರಾಜ ಮತ್ತು ದಳಪತಿ ವಿಜಯ್ ಒಂದೇ ಹಾಡಿಗೆ ಒಟ್ಟಿಗೇ ಹಾಡಲಿದ್ದಾರೆ ಎಂಬ ಮಾತು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಹರಿದಾಡುತ್ತಿದೆ. ಈ ಹಾಡಿಗೆ ವೆಂಕಟ್ ಪ್ರಭು ತಂದೆ, ಅಂದರೆ ಇಳಯರಾಜ ಸಹೋದರ ಗಂಗೈ ಅಮರನ್ ಸಾಹಿತ್ಯ ಬರೆದಿದ್ದಾರಂತೆ.

ದಳಪತಿ ವಿಜಯ್ ಸಿನಿಮಾಗೆ ಇಳಯರಾಜ ಕೊನೆಯದಾಗಿ ಸಂಗೀತ ಸಂಯೋಜಿಸಿದ್ದು, 2001 ರಲ್ಲಿ ಬಿಡುಗಡೆಯಾದ ಫ್ರೆಂಡ್ಸ್ ಸಿನಿಮಾದಲ್ಲಿ. ಈ ಸಿನಿಮಾದ ಹಾಡು ಸೇರಿದಂತೆ ವಿಜಯ್-ಇಳಯರಾಜ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಎಲ್ಲಾ ಹಾಡುಗಳೂ ಸೂಪರ್ ಹಿಟ್ ಆಗಿವೆ. ಹೀಗಾಗಿ ಈಗ ಈ ಇಬ್ಬರು ಬರೋಬ್ಬರಿ 23 ವರ್ಷದ ಬಳಿಕ ಒಂದಾಗಲಿದ್ದಾರೆ ಎಂಬ ಸುದ್ದಿಯೇ ಫ್ಯಾನ್ಸ್ ಗೆ ಥ್ರಿಲ್ ನೀಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಸಿನಿಮಾ ಗಳಿಕೆ ಲೆಕ್ಕ ಸುಳ್ಳಾ? ರಾಕ್ ಲೈನ್ ವೆಂಕಟೇಶ್ ಹೇಳಿದ್ದೇನು?