Select Your Language

Notifications

webdunia
webdunia
webdunia
webdunia

ವಿಚ್ಛೇದನದ ಬಳಿಕ ಧನುಷ್, ಐಶ್ವರ್ಯಾ ರಜನೀಕಾಂತ್ ಮಕ್ಕಳ ಕತೆಯೇನು

Dhanush-Aishwarya

Krishnaveni K

ಚೆನ್ನೈ , ಗುರುವಾರ, 11 ಏಪ್ರಿಲ್ 2024 (11:08 IST)
ಚೆನ್ನೈ: ತಮಿಳು ಸ್ಟಾರ್ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ನಡುವಿನ ವಿಚ್ಛೇದನ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ.

ಕೆಲವು ಸಮಯ ಹಿಂದೆ ಇಬ್ಬರೂ ದೂರವಾಗುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಪ್ರಕಟಿಸಿದ್ದರು. ಇದೀಗ ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಕೊಂಡು ಅರ್ಜಿ ಸಲ್ಲಿಸಿರುವುದರಿಂದ ಎಲ್ಲವೂ ಶಾಂತ ರೀತಿಯಲ್ಲೇ ಮುಕ್ತಾಯಗೊಳ್ಳಲಿದೆ.

ಧನುಷ್ ಬಳಿ ಸುಮಾರು 180 ಕೋಟಿ ರೂ.ಗಳಷ್ಟು ಆಸ್ತಿ ಪಾಸ್ತಿಯಿದೆ. ಇದರಲ್ಲಿ ಕೆಲವು ಅಂಶ ಐಶ್ವರ್ಯಾಗೂ ಸಿಗಲಿದೆ ಎನ್ನಲಾಗಿದೆ. ಇದಲ್ಲದೆ, ಈ ದಂಪತಿಗೆ 11 ಮತ್ತು 18 ವರ್ಷದ ಮಕ್ಕಳಿದ್ದಾರೆ.  ಈ ಇಬ್ಬರೂ ಮಕ್ಕಳು ಈಗ ಐಶ್ವರ್ಯಾ ಜೊತೆಯಲ್ಲಿದ್ದಾರೆ.

ಮುಂದೆಯೂ ಈ ಮಕ್ಕಳ ಪಾಲನೆ ಅವಕಾಶ ನನಗೆ ಬೇಕು ಎಂದು ಐಶ್ವರ್ಯಾ ಕೇಳಿಕೊಂಡಿದ್ದಾರಂತೆ. ಇದಕ್ಕೆ ಧನುಷ್ ಕೂಡಾ ಒಪ್ಪಿಗೆ ಕೊಟ್ಟಿದ್ದು, ಮುಂದೆ ಮಕ್ಕಳ ಪಾಲನೆ ಜವಾಬ್ದಾರಿಯನ್ನು ಐಶ್ವರ್ಯಾ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿಗೆ ಪೋಷಕರಾದ ಸತ್ಯ ಧಾರವಾಹಿ ಹೀರೋ ಸಾಗರ್ ಬಿಳಿಗೌಡ