Select Your Language

Notifications

webdunia
webdunia
webdunia
webdunia

ಅಪ್ಪನ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ದುನಿಯಾ ವಿಜಯ್ ಪುತ್ರಿ

ಅಪ್ಪನ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ದುನಿಯಾ ವಿಜಯ್ ಪುತ್ರಿ

Sampriya

ಬೆಂಗಳೂರು , ಬುಧವಾರ, 10 ಏಪ್ರಿಲ್ 2024 (17:50 IST)
photo Courtesy Instagram
ಬೆಂಗಳೂರು: ನಟ ದುನಿಯಾ ವಿಜಯ್ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.  

ಈ ಹಿಂದೆ ಮೋನಿಕಾ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗೆಲ್ಲ ಯಾವಾಗ ಸಿನಿಮಾ ರಂಗಕ್ಕೆ ಎಂಟ್ರಿ ಎಂದು ಪ್ರಶ್ನೆ ಬರುತ್ತಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

ಬೆಂಗಳೂರಿನ ದೇವಸ್ಥಾನವೊಂದರಲ್ಲಿ ನಾಳೆ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ವಿಜಯ್ ಹೊಸ ಸಿನಿಮಾಗೆ ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಜಡೇಶ್ ಕೆ.ಹಂಪಿ, ದುನಿಯಾ ವಿಜಯ್, ರಚಿತಾ ರಾಮ್ , ಮೋನಿಕಾ ವಿಜಯ್, ಶಿಶಿರ್ ಮುಂತಾದವರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ದುನಿಯಾ ವಿಜಯ್‌ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಲಿದ್ದಾರೆ.  ಜಡೇಶ್ ಕೆ. ಹಂಪಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಮೋನಿಕಾಗೆ ಉತ್ತಮ ಪಾತ್ರವನ್ನು ಸೃಷ್ಟಿಸಲಾಗಿದೆ.

ವಿಜಯ್ ಹಾಗೂ ರಚಿತಾ ಈ ಹಿಂದೆ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

'ನನ್ನ ಮೇಲೆ ನಂಬಿಕೆಯಿಟ್ಟ ಮೊದಲ ವ್ಯಕ್ತಿ': ಒಡಹುಟ್ಟಿದವರ ದಿನಕ್ಕೆ ಸಹೋದರನ ಬಗ್ಗೆ ವರುಣ್ ಧವನ್ ಪೋಸ್ಟ್‌