Select Your Language

Notifications

webdunia
webdunia
webdunia
webdunia

ಜೈಲಿಂದ ಹೊರ ಬಂದ್ಮೇಲೆ ಯುಗಾದಿ ಆಚರಿಸಿದ ಸೋನು ಗೌಡ

Big Boss Contest Sonu Srinivas Gowda

Sampriya

ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2024 (20:19 IST)
photo Courtesy Instagram
ಬೆಂಗಳೂರು:  ಬಾಲಕಿ ದತ್ತು ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ನಂತರ ಫುಲ್ ಸೈಲೆಂಟ್‌ ಆಗಿದ್ದ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರು ಇಂದು ಸಂಭ್ರಮದಲ್ಲಿ ಯುಗಾದಿ ಹಬ್ಬವನ್ನು ಆಸಚರಿಸಿದ್ದಾರೆ.

ನಾಡಿನ ಜನತೆಗೆ ಶುಭಕೋರಿರುವ ಅವರು ಸೀರೆಯಲ್ಲಿ ಪೋಸ್ ಕೊಟ್ಟ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಪಿಂಕ್ ಬಣ್ಣ ಸೀರೆಯುಟ್ಟು ಸೋನು ಗೌಡ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಜೈಲಿಂದ ಬಿಡುಗಡೆಯಾದ ನಂತರ ಫುಲ್ ಸೈಲೆಂಟ್‌ ಆಗಿದ್ದ ಸೋನು ಅವರು ಯಾವುದರ ಬಗ್ಗೆಯೂ ಹೇಳಿಕೆ ನೀಡದೆ ಮನೆಗೆ ವಾಪಾಸ್ಸಾಗಿದ್ದರು. ಇದೀಗ  ಯುಗಾದಿ ದಿನದಂದು ಕಹಿನೆಲ್ಲಾ ಮರೆತು ಖುಷಿಯಿಂದ ಹೊಸ ಹೆಜ್ಜೆ ಇಡುತ್ತಿರುವ ಸೂಚನೆಯನ್ನು ನೀಡಿದ್ದಾರೆ.

ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿ ಫುಲ್ ಸೈಲೆಂಟ್ ಆಗಿದ್ದ ಸೋನು ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಯಾವುದನ್ನು ಹೇಳಿಲ್ಲ. ಅದಲ್ಲದೆ ಈ ವಿವಾದದಿಂದ ಮಾನಸಿಕವಾಗಿ ತುಂಬಾ ನೋವಾಗಿದೆ ಎಂದು ಸ್ನೇಹಿತ ರಾಕೇಶ್ ಅಡಿಗ ಜತೆ ಅವರು ಹೇಳಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

'ನಿನಗಾಗಿ' ಎನ್ನುತ್ತಾ ಕಿರುತೆರೆಗೆ ರೀ ಎಂಟ್ರಿ ಕೊಟ್ಟ ದಿವ್ಯ ಉರುಡುಗ