ಬೆಂಗಳೂರು: ನಟಿ ಸಂಜನಾ ಗಲ್ರಾನಿಗೆ ವಂಚನೆ ಮಾಡಿದ ವ್ಯಕ್ತಿಗೆ ಬರೋಬ್ಬರಿ 61 ಲಕ್ಷ ರೂ. ದಂಡ ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ರಾಹುಲ್ ತೋನ್ಸೆ ಎಂಬಾತನ ವಿರುದ್ಧ ಸಂಜನಾ ನೀಡಿದ್ದ ವಂಚನೆ ಪ್ರಕರಣದ ಆಧಾರದಲ್ಲಿ 33 ನೇ ಎಸಿಜೆಎಂ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
2018-19 ರಲ್ಲಿ ನಡೆದ ಪ್ರಕರಣ
ಅಧಿಕ ಲಾಭದ ಆಮಿಷವೊಡ್ಡಿಹೂಡಿಕೆ ಮಾಡಲು ಸಂಜನಾ ಗಲ್ರಾನಿಗೆ ರಾಹುಲ್ ತೋನ್ಸೆ ಹೇಳಿದ್ದ. ಈ ಸಂಬಂಧ ಸಂಜನಾರಿಂದ 45 ಲಕ್ಷ ರೂ. ಪಡೆದುಕೊಂಡಿದ್ದ. ಮೂಲತಃ ಈಗ ಶ್ರೀಲಂಕಾದಲ್ಲಿ ಕ್ಯಾಸಿನೊ ಒಂದನ್ನುನಡೆಸುತ್ತಿದ್ದಾನೆ. ಅಧಿಕ ಲಾಭ ಬರುತ್ತದೆ ಎಂದು ತನಗೆ ವಂಚನೆ ಮಾಡಿದ್ದಾನೆ ಎಂದು ಸಂಜನಾ ಇಂದಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತೀರ್ಪು ಇದೀಗ ಪ್ರಕಟವಾಗಿದೆ. ರಾಹುಲ್ ಮಾತ್ರವಲ್ಲದೆ ಆತನ ಪೋಷಕರ ವಿರುದ್ಧ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಮೊದಲೂ ರಾಹುಲ್ ಇನ್ನೊಬ್ಬ ಉದ್ಯಮಿಗೆ 25 ಕೋಟಿ ರೂ. ವಂಚನೆ ಮಾಡಿದ ಆರೋಪವಿದೆ. ಇದೀಗ ಸಂಜನಾ ಪ್ರಕರಣದಲ್ಲಿ ಆತನ ವಿರುದ್ಧದ ಆರೋಪ ಸಾಬೀತಾಗಿದ್ದು ಶಿಕ್ಷೆ ಪ್ರಕಟವಾಗಿದೆ.
ಇನ್ನು, ಸಂಜನಾ ವಿಚಾರಕ್ಕೆ ಬಂದರೆ ಇತ್ತೀಚೆಗಿನ ದಿನಗಳಲ್ಲಿ ಅವರು ಸಿನಿಮಾಗಳಿಂದ ದೂರವೇ ಇದ್ದಾರೆ. 2021 ರಲ್ಲಿ ವೈದ್ಯ ಅಜೀಜ್ ಪಾಶಾ ಅವರನ್ನು ವಿವಾಹವಾಗಿದ್ದಾರೆ. ಈಗಾಗಲೇ ಅವರಿಗೆ ಓರ್ವ ಪುತನಿದ್ದು, ಸಂಜನಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.