ಡಿ ಬಾಸ್ ದರ್ಶನ್ ತೆಗೆದ ಫೋಟೋಗೆ ಹಾಸ್ಯ ನಟ ಚಿಕ್ಕಣ್ಣ ಕೊಟ್ಟ ಬೆಲೆಯೆಷ್ಟು ಗೊತ್ತೇ?!

ಗುರುವಾರ, 16 ಮೇ 2019 (08:44 IST)
ಬೆಂಗಳೂರು: ಡಿ ಬಾಸ್ ದರ್ಶನ್ ಗೆ ವೈಲ್ಡ್ ಲೈಫ್ ಫೋಟೋಗ್ರಫಿ ಮೇಲೆ ಎಷ್ಟು ಕ್ರೇಜ್ ಇದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಕಾಡು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳವುದು, ಕಾಡಿನಲ್ಲಿ ಸುತ್ತಾಡುವುದು ದರ್ಶನ್ ಮೆಚ್ಚಿನ ಹವ್ಯಾಸಗಳು.


ಇತ್ತೀಚೆಗೆ ದರ್ಶನ್ ತಾವು ತೆಗೆದ ಫೋಟೋಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿ ಅದರಿಂದ ಬಂದ ಹಣವನ್ನು ಕಾಡು ಪ್ರಾಣಿಗಳ ನೆರವಿಗೆ ನೀಡಿದ್ದರು. ಇದೀಗ ದರ್ಶನ್ ತೆಗೆದ ಆನೆಯ ಛಾಯಾಚಿತ್ರವೊಂದನ್ನು ಹಾಸ್ಯ ನಟ ಚಿಕ್ಕಣ್ಣ ಖರೀದಿಸಿದ ಸುದ್ದಿ ಬಂದಿದೆ.

ಅದನ್ನು ಸ್ವತಃ ದರ್ಶನ್ ಪ್ರಕಟಿಸಿದ್ದು, ಜತೆಗೆ ಚಿಕ್ಕಣ್ಣ ಈ ಫೋಟೋಗೆ 1 ಲಕ್ಷ ರೂ. ಬೆಲೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಹಣವನ್ನು ಅರಣ್ಯ ಇಲಾಖೆಯ ನೆರವಿಗೆ ನೀಡಲಾಗುತ್ತದಂತೆ. ಆ ಮೂಲಕ ಅರಣ್ಯ ಇಲಾಖೆಗೆ ನೆರವಾದ ಚಿಕ್ಕಣ್ಣನಿಗೆ ದರ್ಶನ್ ಟ್ವಿಟರ್ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಬೇರೆ ಹುಡುಗಿಯರ ಮೇಲೆ ಕಣ್ಣು ಹಾಕಿದರೆ ಪತಿ ಅಜಯ್ ದೇವಗನ್ ಗೆ ಕಾಜೋಲ್ ಏನು ಮಾಡ್ತಾರೆ ಗೊತ್ತಾ?!