Select Your Language

Notifications

webdunia
webdunia
webdunia
webdunia

ಪುಷ್ಪಾ 2 ಐಟಂ ಸಾಂಗ್‌ ಬಳಿಕ ಶ್ರೀಲೀಲಾಗೆ ಬಿಗ್‌ ಆಫರ್‌: ನಾಗಚೈತನ್ಯಗೆ ಕನ್ನಡತಿ ಜೋಡಿ

Pushpa 2 Movie

Sampriya

ಬೆಂಗಳೂರು , ಬುಧವಾರ, 11 ಡಿಸೆಂಬರ್ 2024 (18:12 IST)
Photo Courtesy X
ಬೆಂಗಳೂರು: ಪುಷ್ಪ 2 ಸಿನಿಮಾದಲ್ಲಿ ಐಟಂ ಹಾಡಿಗೆ ಕನ್ನಡತಿ ಶ್ರೀಲೀಲಾ ಸೊಂಟ ಬಳುಕಿಸಿದ ಮೇಲೆ ಬೇಡಿಕೆ ಹೆಚ್ಚಾಗಿದೆ. ಉತ್ತಮ ಅಫರ್‌ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ.

ಸದ್ಯ ಕರಾವಳಿ ನಟಿ ಪೂಜಾ ಹೆಗ್ಡೆಗೆ ಠಕ್ಕರ್ ಕೊಟ್ಟು ಶ್ರೀಲೀಲಾ ಬಿಗ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಸಿನಿಮಾಗೆ ನಾಯಕಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಟಾಲಿವುಡ್‌ನಿಂದ ಕೇಳಿಬರುತ್ತಿದೆ.

ಟಾಲಿವುಡ್‌ನಲ್ಲಿ ನಟನೆ, ಡ್ಯಾನ್ಸ್, ಬ್ಯೂಟಿ ಮೂಲಕ ಎಲ್ಲರ ಮನಗೆದ್ದಿರುವ ಕನ್ನಡತಿ ಶ್ರೀಲೀಲಾ ಸಾಲು ಸಾಲು ಅವಕಾಶಗಳು ಅರಸಿ ಬರುತ್ತಿವೆ. ನಾಗಚೈತನ್ಯ  ನಟನೆಯ 24ನೇ ಸಿನಿಮಾಗೆ ಪೂಜಾ ಹೆಗ್ಡೆರನ್ನು ಆಯ್ಕೆ ಮಾಡಿದೆ ಎಂಬ ಸುದ್ದಿ ಇತ್ತು. ಈಗ ಪೂಜಾರನ್ನು ನಾಯಕಿ ಪಾತ್ರಕ್ಕೆ ಕೈಬಿಡಲಾಗಿದ್ದು, ಶ್ರೀಲೀಲಾರನ್ನು ತಂಡ ಫೈನಲ್ ಮಾಡಿದೆ ಎನ್ನಲಾಗಿದೆ. ಚಿತ್ರತಂಡ ಈ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ.

ಇನ್ನೂ ಪುಷ್ಪ 2 ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಜೊತೆ ಶ್ರೀಲೀಲಾ ಡ್ಯಾನ್ಸ್ ಮಾಡುವ ಮೂಲಕ ಹೈಪ್ ಕ್ರಿಯೆಟ್ ಆಗಿದೆ. ಜೊತೆಗೆ ನಿತಿನ್ ಜೊತೆಗಿನ ರಾಬಿನ್‌ಹುಡ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಯೋಗ್ಯ ಚಿತ್ರದಲ್ಲಿ ಮೋಡಿ ಮಾಡಿ ಮತ್ತೆ ಒಂದಾದ ಸತೀಶ್‌ ನೀನಾಸಂ, ರಚಿತಾ ರಾಮ್