Select Your Language

Notifications

webdunia
webdunia
webdunia
webdunia

ಅಯೋಗ್ಯ ಚಿತ್ರದಲ್ಲಿ ಮೋಡಿ ಮಾಡಿ ಮತ್ತೆ ಒಂದಾದ ಸತೀಶ್‌ ನೀನಾಸಂ, ರಚಿತಾ ರಾಮ್

Aayogya Movie

Sampriya

ಬೆಂಗಳೂರು , ಬುಧವಾರ, 11 ಡಿಸೆಂಬರ್ 2024 (16:46 IST)
Photo Courtesy X
ಬೆಂಗಳೂರು: ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ  ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಅಯೋಗ್ಯ 2 ಸಿನಿಮಾಗಿ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಮತ್ತೆ ಒಂದಾಗಿದ್ದಾರೆ. 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ನಡೆದ ಅದ್ಧೂರಿ ಮುಹೂರ್ತ ಸಮಾರಂಭದಲ್ಲಿ ಅಯೋಗ್ಯ 2 ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಡೈರೆಕ್ಟರ್ ಮಹೇಶ್ ಕುಮಾರ್ ಸಾರಥ್ಯದಲ್ಲಿಈ ಸಿನಿಮಾ ಮೂಡಿ ಬರುತ್ತಿದ್ದು‌, ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್‌ನಲ್ಲಿ ಬಂಡವಾಳ ಹೂಡಿದ್ದಾರೆ.  

ಅಶ್ವಿನಿ ಪುನೀತ್ ರಾಜ್‌ಕುಮಾರ್  ಅಯೋಗ್ಯ 2‌ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯರ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ಮಹೇಶ್ ಮಾತನಾಡಿ, ಅಯೋಗ್ಯ  2 ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದ್ಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

ನೀನಾಸಂ ಸತೀಶ್ ಮಾತನಾಡಿ, ಅಯೋಗ್ಯ 2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ ಅವರು ಉತ್ತಮ ನಿರ್ಮಾಪಕರು. ಅಯೋಗ್ಯ 2 ಸಿನಿಮಾ ಕನ್ನಡ ಸಿನಿಮಾರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ ಎಂದು ಹೇಳಿದರು.

ರಚಿತಾ ರಾಮ್ ಮಾತನಾಡಿ, ಕಳೆದ 6 ವರ್ಷದ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಆಗಿತ್ತು. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಮ್ ಅವರ ಆಶೀರ್ವಾದವಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಚೈತನ್ಯ ಮದುವೆಯಾದ ಬೆನ್ನಲ್ಲೇ ಹೊಸ ಜೀವನದ ಸುಳಿವು ಕೊಟ್ಟ ಮಾಜಿ ಪತ್ನಿ ಸಮಂತಾ