Select Your Language

Notifications

webdunia
webdunia
webdunia
webdunia

ನಾಗಚೈತನ್ಯ ಮದುವೆಯಾದ ಬೆನ್ನಲ್ಲೇ ಹೊಸ ಜೀವನದ ಸುಳಿವು ಕೊಟ್ಟ ಮಾಜಿ ಪತ್ನಿ ಸಮಂತಾ

Actor Naga Chaitanya

Sampriya

ಮುಂಬೈ , ಬುಧವಾರ, 11 ಡಿಸೆಂಬರ್ 2024 (14:45 IST)
Photo Courtesy X
ಮುಂಬೈ: ನಟ ನಾಗಚೈತನ್ಯ ಅವರು ಎರಡನೇ ಮದುವೆಯಾದ ಬೆನ್ನಲ್ಲೇ ಅವರ ಮಾಜಿ ಪತ್ನಿ, ನಟಿ ಸಮಂತಾ ರುತ್‌ ಪ್ರಭು ಎರಡನೇ ಮದುವೆಯಾಗುವ ಸುಳಿವು ನೀಡಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಸಮಂತಾ ಅವರು 2025ರ ರಾಶಿ ಭವಿಷ್ಯದ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವುದು ಇದಕ್ಕೆ ಕಾರಣ. ಹೀಗಾಗಿ, ಅವರ ಎರಡನೇ ಮದುವೆ ಮುನ್ನಡೆಗೆ ಬಂದಿದೆ.

ಡಿಸೆಂಬರ್ 4ರಂದು ಸಮಂತಾ ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆಯಾಗಿದ್ದರು. ನಾಯಕಿ ಶೋಭಿತಾ ದುಳಿಪಾಲ ಜೊತೆ ನಾಗಚೈತನ್ಯ ಮದುವೆ ಹೈದರಾಬಾದ್ ನಗರದ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇಬ್ಬರ ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಸಮಂತಾ ಇನ್‌ಸ್ಟಾಗ್ರಾಂ ಸ್ಟೇಟಸ್ ಚರ್ಚೆಗೆ ಗ್ರಾಸವಾಗಿದೆ.

ಸಮಂತಾ ಹಂಚಿಕೊಂಡ ಫೋಟೋದಲ್ಲಿ ಮೂರು ರಾಶಿಗಳ ಭವಿಷ್ಯವಾಗಿದೆ. ಸಮಂತಾ ಅವರದ್ದು ವೃಷಭ ರಾಶಿಯಾಗಿದೆ. ಆದ್ರೆ ಇನ್ನುಳಿದ ಎರಡು ರಾಶಿ ಯಾರದ್ದು ಎಂದು ಅಭಿಮಾನಿಗಳು ತಲೆಗೆ ಹುಳು ಬಿಟ್ಟುಕೊಂಡಿದ್ದಾರೆ.

2025 ಅತ್ಯಂತ ಬಿಡುವಿಲ್ಲದ ವರ್ಷವಾಗಿರಲಿದ್ದು, ಕರಕುಶಲತೆಯ ಪ್ರಗತಿ ಮತ್ತು ಅದಕ್ಕಾಗಿ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಈ ವರ್ಷ ಆರ್ಥಿಕ ಸ್ಥಿರವಾಗಿರುತ್ತದೆ. ಅತ್ಯಂತ ನಿಷ್ಠಾವಂತ ಮತ್ತು ಪ್ರೀತಿಯ ಸಂಗಾತಿ ಸಿಗಲಿದ್ದಾರೆ. ಈ ವರ್ಷ ನಿಮ್ಮ ದೊಡ್ಡ ಗುರಿಗಳನ್ನು ತಲುಪುತ್ತೀರಿ. ಆದಾಯದ ಮೂಲಗಳು ಹೆಚ್ಚಾಗಲಿವೆ. ಹೊಸ ಆಯ್ಕೆಗಳ ಅವಕಾಶ ಸಿಗಲಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರುತ್ತದೆ. ಮಗುವಿಗಾಗಿ ಪ್ರಯತ್ನಿಸುತ್ತಿದ್ರೆ ಕನಸು ಈಡೇರಲಿದೆ. ಈ ವಿಷಯದಲ್ಲಿ ಜಾಗರೂಕರಾಗಿರಬೇಕಾಗುತ್ತದೆ.

ಇದರಲ್ಲಿರುವ ವಿಷಯಗಳು ತಮ್ಮ ವೃತ್ತಿ ಮತ್ತು ಖಾಸಗಿ ಜೀವನಕ್ಕೆ ಹತ್ತಿರವಾಗಿರುವ ಕಾರಣ ಸಮಂತ ಈ ಪೋಸ್ಟ್ ಮಾಡಿಕೊಂಡಿದ್ದಾರೆ ಎಂಬ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಜ ಜೀವನದಲ್ಲೂ ಲವ್ ಮಾಡ್ತಿದ್ದಾರಾ ಕಮಲಿ ಜೋಡಿ ನಿರಂಜನ್, ಅಮೂಲ್ಯ ಗೌಡ