Select Your Language

Notifications

webdunia
webdunia
webdunia
webdunia

ದೇವರಕೊಂಡ ಫ್ಯಾಮಿಲಿನೊಂದಿಗೆ ಪುಷ್ಪ 2 ವೀಕ್ಷಿಸಿದ ರಶ್ಮಿಕಾ: ಏನಿದರ ಗುಟ್ಟು ಎಂದ ಅಭಿಮಾನಿಗಳು

ದೇವರಕೊಂಡ ಫ್ಯಾಮಿಲಿನೊಂದಿಗೆ ಪುಷ್ಪ 2 ವೀಕ್ಷಿಸಿದ ರಶ್ಮಿಕಾ: ಏನಿದರ ಗುಟ್ಟು ಎಂದ ಅಭಿಮಾನಿಗಳು

Sampriya

ಬೆಂಗಳೂರು , ಶುಕ್ರವಾರ, 6 ಡಿಸೆಂಬರ್ 2024 (14:13 IST)
Photo Courtesy X
ಬೆಂಗಳೂರು: ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ನಡುವೆ ರಿಲೇಷನ್‌ಷಿಪ್‌ ಇದೆ ಎಂಬ ಗಾಸಿಪ್‌ ಮಧ್ಯೆ ದೇವರಕೊಂಡ ಕುಟುಂಬದೊಂದಿಗೆ ರಶ್ಮಿಕಾ ಅವರು ಪುಷ್ಪಾ ಸಿನಿಮಾ ವೀಕ್ಷಿಸಿದ್ದಾರೆ.

ಗುರುವಾರ ರಾತ್ರಿ ಹೈದರಾಬಾದ್‌ನ ಎಎಂಬಿ ಸಿನಿಮಾಸ್‌ನಲ್ಲಿ ವಿಜಯ್ ದೇವರಕೊಂಡ ಫ್ಯಾಮಿಲಿಗೆ ಪುಷ್ಪ 2 ಚಿತ್ರವನ್ನು ರಶ್ಮಿಕಾ ತೋರಿಸಿದ್ದಾರೆ. ವಿಜಯ್ ತಾಯಿ ಮಾಧವಿ ಮತ್ತು ಸಹೋದರ ಆನಂದ್ ದೇವರಕೊಂಡ ಅವರು ನಟಿಯೊಂದಿಗೆ ಕಾಣಿಸಿಕೊಂಡಿರುವ ಚಿತ್ರ ವೈರಲ್‌ ಆಗಿದೆ. ಇವರೊಂದಿಗೆ ವಿಜಯ್ ಇಲ್ಲ. ಆದರೆ ವಿಜಯ್ ಒಡೆತನದ ರೌಡಿ ಕಸ್ಟ್‌ಮೈಸ್  ಟೀ- ಶರ್ಟ್ ಅನ್ನು ರಶ್ಮಿಕಾ ಧರಿಸಿರೋದು ಅಭಿಮಾನಿಗಳ ಗಮನ ಸೆಳೆದಿದೆ.

ಇತ್ತೀಚೆಗೆ ನಟಿ ಪುಷ್ಪ 2 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮದುವೆ ಬಗ್ಗೆ ಸುಳಿವು ನೀಡಿದ್ದರು. ಅದಷ್ಟೇ ಅಲ್ಲ, ಇತ್ತ ವಿಜಯ್ ಕೂಡ ಸಂದರ್ಶನವೊಂದರಲ್ಲಿ ನನಗೆ 35 ವರ್ಷವಾಗಿದೆ. ನಾನು ಸಿಂಗಲ್ ಆಗಿದ್ದೇನೆ ಎಂದು ಭಾವಿಸುತ್ತೀರಾ? ಎಂದು ನಿರೂಪಕಿಯನ್ನು ಪ್ರಶ್ನಿಸಿದರು. ಈ ಮೂಲಕ ತಾವು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸುಳಿವು ನೀಡಿದ್ದರು.

ಈ ಬೆನ್ನಲ್ಲೇ ವಿಜಯ್ ಫ್ಯಾಮಿಲಿ ಜೊತೆ ರಶ್ಮಿಕಾ ಕಾಣಿಸಿಕೊಂಡಿರೋದು ಇಬ್ಬರ ರಿಲೇಷನ್‌ಶಿಪ್ ವದಂತಿಗೆ ಪುಷ್ಠಿ ಸಿಕ್ಕಂತಾಗಿದೆ. ಮುಂದಿನ ವರ್ಷ ವಿಜಯ್‌ ಜೊತೆ ನಟಿ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Pushpa 2 collection: ಪುಷ್ಪ 2 ಸಿನಿಮಾ ಕನ್ನಡದಲ್ಲಿ ಗಳಿಕೆ ಮಾಡಿದ್ದೆಷ್ಟು