ಬೆಂಗಳೂರು: ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟ ಅನಿರುದ್ಧ್ ಅವರು ಈಚೆಗೆ ಸಾಮಾಜಿಕ ಕಳಕಳಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸುವಂತೆ ನಟ ಅನಿರುದ್ಧ್ ಅವರು ವಿಶೇಷವಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಆ ಸಮಸ್ಯೆನ್ನು ಬಗೆಹರಿಸಿರುವುದಾಗಿ ನಟ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಕನಕಪುರ ಮುಖ್ಯರಸ್ತೆ ಹಾಗೂ NH 209 ರಸ್ತೆಯಲ್ಲಿ ಪೆಟ್ರೋಲ್ ಬಂಕ್, ಟಿವಿಎಸ್ ಶೋ ರೂಂ ಇದೆ. ಈ ರಸ್ತೆಯನ್ನು ಗಮನಿಸಿದಾಗ ತುಂಬಾನೇ ಹದಗೆಟ್ಟಿದೆ. ಮೂರರಿಂದ ನಾಲ್ಕು ಕಿಲೋ ಮೀಟರ್ ಇದೇ ರೀತಿಯ ರಸ್ತೆಯನ್ನು ಕಾಣಬಹುದು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಮನವಿ ಮಾಡಿದ್ದರು.
ಅಧಿಕಾರಿಗಳು ಈ ವಿಡಿಯೋವನ್ನು ನೋಡಿ ತಕ್ಷಣವೇ ಸ್ಪಂದಿಸಿದ್ದಾರೆ. ಸದ್ಯ ಹದಗೆಟ್ಟ ರೋಡ್‌ಗೆ ಟಾರ್ ಅನ್ನು ಹಾಕಲಾಗುತ್ತಿದೆ. ನಾನು ಈ ವಿಡಿಯೋ ಮೂಲಕ ಅಧಿಕಾರಿಗಳಿಗೆ ಪ್ರತಿನಿಧಿಗಳಿಗೆ ತುಂಬಾನೇ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಒಟ್ಟಾರೆ ನಟನೆಯ ಜತೆಗೆ ಸಾಮಾಜಿಕ ಕಳಕಳಿಯ ಸಂದೇಶವನ್ನು ಸಾರುತ್ತಿರುವ ನಟನ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.