Select Your Language

Notifications

webdunia
webdunia
webdunia
webdunia

ಬೆಂಗಳೂರು ಒನ್ ಕೇಂದ್ರದಲ್ಲೂ ಇ ಖಾತಾ ಮಾಡಿಸಲು ಕಷ್ಟವೇ: ಬಿಬಿಎಂಪಿಯಿಂದ ಹೊಸ ಪ್ಲ್ಯಾನ್

BBMP

Krishnaveni K

ಬೆಂಗಳೂರು , ಸೋಮವಾರ, 18 ನವೆಂಬರ್ 2024 (09:26 IST)
ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ಇ ಖಾತಾ ಮಾಡಿಸಲು ಬಿಬಿಎಂಪಿ ಸಾಕಷ್ಟು ಆಯ್ಕೆಗಳನ್ನು ನೀಡಿದ್ದರೂ ತೊಂದರೆ ತಪ್ಪಿಲ್ಲ. ಇದೀಗ ಸಾರ್ವಜನಿಕರ ಅನುಕೂಲಕ್ಕೆ ಮತ್ತೊಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿದೆ.

ಬೆಂಗಳೂರಿನಲ್ಲಿ ಜನ ತಮ್ಮ ಆಸ್ತಿಗಳಿಗೆ ಇ ಖಾತಾ ಮಾಡಿಸಲು ಆನ್ ಲೈನ್ ಮತ್ತು ಬಿಬಿಎಂಪಿ ಕಚೇರಿಯಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಬಿಬಿಎಂಪಿ ಕಚೇರಿಯಲ್ಲಿ ಜನ ಜಂಗುಳಿಯಿಂದ ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಆನ್ ಲೈನ್ ನಲ್ಲಿ ಇ ಖಾತಾ ಮಾಡಿಸಲಾಗುತ್ತಿತ್ತು. ಆದರೆ ಸೈಬರ್ ಸೆಂಟರ್ ಗಳಲ್ಲಿ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಹೀಗಾಗಿ ಬಿಬಿಎಂಪಿ ಬೆಂಗಳೂರು ಒನ್ ಸಿಬ್ಬಂದಿಗಳಿಗೆ ತರಬೇತಿ ನೀಡಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಿಗದಿತ ಶುಲ್ಕ ನೀಡಿ ಇ ಖಾತಾ ಮಾಡಿಸಲು ಅವಕಾಶ ನೀಡಿತ್ತು. ಅದರಂತೆ 45 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ ಈಗ ಬೆಂಗಳೂರು ಒನ್ ಕೇಂದ್ರದಲ್ಲೂ ಸಾಕಷ್ಟು ಜನ ಬರುತ್ತಿರುವುದರಿಂದ ಮತ್ತು ಜನರಲ್ಲಿರುವ ಗೊಂದಲಗಳಿಂದಾಗಿ ಇಲ್ಲೂ ಇ ಖಾತಾ ಮಾಡಿಸಲು ಕಷ್ಟವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.

ಈ ಹಿನ್ನಲೆಯಲ್ಲಿ ಬಿಬಿಎಂಪಿ ಇ ಖಾತಾ ನೋಂದಾಯಿಸುವ ಹೊಣೆಯನ್ನು ಖಾಸಗಿ ಕಂಪನಿಗೆ ವಹಿಸಲು ಚಿಂತನೆ ನಡೆಸಿದೆ. ಪಾಸ್ ಪೋರ್ಟ್ ಕಚೇರಿ ಮಾದರಿಯಲ್ಲಿ ಇ ಖಾತಾವನ್ನು ಖಾಸಗಿ ಕಂಪನಿಯ ಹೊಣೆಗಾರಿಯಲ್ಲಿ ತಾತ್ಕಾಲಿಕ ಕೇಂದ್ರ ತೆರೆದು ಮಾಡಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಸದ್ಯದಲ್ಲೇ ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದ್ದು ಜನರ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆರಿಗೆ ಕಟ್ಟುವವರು ಯಾರೂ ಮನುಷ್ಯರಲ್ವಾ: ಬಿಪಿಎಲ್ ಕಾರ್ಡ್ ರದ್ದತಿಗೆ ಕೇಳಿಬಂತು ಆಕ್ರೋಶ