Select Your Language

Notifications

webdunia
webdunia
webdunia
webdunia

ಬೆಂಗಳೂರು ಒನ್ ಕೇಂದ್ರದಲ್ಲಿ ಇ ಖಾತಾ ಮಾಡಿಸುವುದು ಹೇಗೆ, ಏನೆಲ್ಲಾ ದಾಖಲೆಗಳು ಬೇಕು

BBMP

Krishnaveni K

ಬೆಂಗಳೂರು , ಗುರುವಾರ, 14 ನವೆಂಬರ್ 2024 (09:41 IST)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಇ ಖಾತಾ ಮಾಡಿಸಲು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಒನ್ ಕೇಂದ್ರದಲ್ಲಿ ಇ ಖಾತಾ ಮಾಡಿಸಲು ಅವಕಾಶ ಮಾಡಿಕೊಡಲಾಗಿದೆ. ಇ ಖಾತಾ ಮಾಡಿಸುವುದು ಹೇಗೆ, ಏನೆಲ್ಲಾ ದಾಖಲೆಗಳು ಬೇಕು ಇಲ್ಲಿ ನೋಡಿ.

ಇದುವರೆಗೆ ಇ ಖಾತಾ ಮಾಡಿಸಲು ಬಿಬಿಎಂಪಿ ಕಚೇರಿ ಅಥವಾ ಆನ್ ಲೈನ್ ಮೂಲಕ ಮಾಡಿಸಲು ಅವಕಾಶವಿತ್ತು. ಆದರೆ ಆನ್ ಲೈನ್ ಮೂಲಕ ಮಾಡಿಸಲು ಕೆಲವು ಸೈಬರ್ ಸೆಂಟರ್ ಗಳಲ್ಲಿ ಮಿತಿ ಮೀರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿತ್ತು.

ಈ ಹಿನ್ನಲೆಯಲ್ಲಿ ಬಿಬಿಎಂಪಿ ಬೆಂಗಳೂರು ಒನ್ ಸಿಬ್ಬಂದಿಗಳಿಗೆ ತರಬೇತಿ ನೀಡಿ ಈ ಕೇಂದ್ರಗಳಲ್ಲೂ ಇ ಖಾತಾ ಮಾಡಿಸಲು ಅವಕಾಶ ನೀಡಿತ್ತು. ಬೆಂಗಳೂರು ಒನ್ ಕೇಂದ್ರಗಳಲ್ಲಿ 45 ರೂ. ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂ. ಪಾವತಿಸಬೇಕಾಗುತ್ತದೆ. ಬಿಬಿಎಂಪಿಗೆ 125 ರೂ. ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಪಾವತಿ ಮಾಡಬೇಕಾಗುತ್ತದೆ.

ಯಾವೆಲ್ಲಾ ದಾಖಲೆಗಳು ಬೇಕು?
ಆಸ್ತಿ ತೆರಿಗೆ ರಶೀದಿ
ಮಾರಾಟ ಅಥವಾ ನೊಂದಾಯಿತ ಪತ್ರ
ಮಾಲಿಕರ ಆಧಾರ್ ಕಾರ್ಡ್
ಬೆಸ್ಕಾಂ ಬಿಲ್
ಕಾವೇರಿ ನೀರಿನ ಸಂಪರ್ಕ ಹೊಂದಿದ್ದರೆ ಬಿಲ್
ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ ದಾಖಲೆ
ಡಿಸಿ ಪರಿವರ್ತನೆ ದಾಖಲೆಯಿದ್ದರೆ
ಬಿಡಿಎ ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್, ಯಾವುದೇ ಸರ್ಕಾರೀ ಪ್ರಾಧಿಕಾರದಿಂದ ಹಂಚಿಕೆಯಾಗಿದ್ದರೆ ಅದರ ಪತ್ರ
ಇವಿಷ್ಟು ದಾಖಲೆಗಳ ವಿವರ ಬೆಂಗಳೂರು ಒನ್ ನಲ್ಲಿ ಆನ್ ಲೈನ್ ನಲ್ಲಿ ನಿಮ್ಮ ವಿವರಗಳನ್ನು ದಾಖಲಿಸುವಾಗ ಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಗುವಿನ ಜೊತೆ ಫ್ರೆಂಡ್ ಶಿಪ್ ಬೆಳೆಸಲು ಹೀಗೆ ಮಾಡಿ