Publish Date: Tue, 12 Nov 2024 (15:18 IST)
Updated Date: Tue, 12 Nov 2024 (15:22 IST)
ಬೆಂಗಳೂರು: ಮಹಿಳೆಯ ಮೇಲೆ ರೇಪ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಬಿಜೆಪಿ ಶಾಸಕ ಮುನಿರತ್ನ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದು ನಾನು ದೇವ್ರಾಣೆ ರೇಪ್ ಮಾಡಿಲ್ಲ, ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ ಎಂದಿದ್ದಾರೆ.
ರಾಜರಾಜೇಶ್ವರಿ ನಗರದ ಶಾಸಕರಾಗಿರುವ ಮುನಿರತ್ನ ರೇಪ್ ಕೇಸ್ ನಲ್ಲಿ ಬಂಧಿತರಾಗಿದ್ದರು. ಇದೀಗ ಷರತ್ತು ಬದ್ಧ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ತಮ್ಮ ಸ್ವ ಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಅವರು ತಾನು ದೇವ್ರಾಣೆ ರೇಪ್ ಮಾಡಿಲ್ಲ ಎಂದಿದ್ದಾರೆ.
ಆ ಕಾಲಭೈರವೇಶ್ವರನ ಆಣೆಗೂ ನಾನು ರೇಪ್ ಮಾಡಿಲ್ಲ. ಒಂದು ವೇಳೆ ಮಾಡಿದ್ರೆ ರಕ್ತ ಕಾರಿ ಸಾಯ್ತೀನಿ ಎಂದು ಹೇಳಿದ್ದಾರೆ. ನಾನು ಮಹಿಳೆಯರನ್ನು ಗೌರವದಿಂದಲೇ ಮಾತನಾಡಿಸುತ್ತೇನೆ. ಯಾರೇ ನನ್ನ ಬಳಿ ಬಂದರೂ ಏನಮ್ಮಾ ತಾಯಿ ಎಂದೇ ಪದ ಬಳಸುತ್ತೇನೆ. ಆದರೆ ಈ ರೀತಿ ನನ್ನ ವಿರುದ್ಧ ಸುಳ್ಳು ದೂರು ಕೊಡಬಾರದಿತ್ತು ಎಂದಿದ್ದಾರೆ.
ದೇವರ ಆಣೆಗೂ ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ನೀವು ಕೊಟ್ಟ ಭಿಕ್ಷೆಯಿಂದ ನಾನು ಎಂಎಲ್ಎ ಆಗಿದ್ದಾನೆ. ನೀವು ರಾಜೀನಾಮೆ ಕೊಡಿ ಎಂದರೆ ತಕ್ಷಣವೇ ಕೊಡುತ್ತೇನೆ ಎಂದಿದ್ದಾರೆ. ಮಹಿಳೆಯೊಬ್ಬರು ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಮಾಡಿದ್ದರು ಎಂದು ಕಗ್ಗಲೀಪುರ ಠಾಣೆಯಲ್ಲಿ ದೂರು ನೀಡಿದ್ದಳು.