Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಈರುಳ್ಳಿ ಖಾಲಿಯಾಗಿದ್ದರೆ ಇಂದೇ ಖರೀದಿಸಿ: ದಾಖಲೆ ಮಾಡಲಿದೆ ಬೆಲೆ

onion

Krishnaveni K

ಬೆಂಗಳೂರು , ಶನಿವಾರ, 9 ನವೆಂಬರ್ 2024 (11:52 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ಸದ್ಯದಲ್ಲೇ ಶತಕದ ಗಡಿ ತಲುಪಲಿದೆ. ಹೀಗಾಗಿ ಮನೆಯಲ್ಲಿ ಈರುಳ್ಳಿ ಖಾಲಿಯಾಗಿದ್ದರೆ ಇಂದೇ ಖರೀದಿ ಮಾಡಿಟ್ಟುಕೊಳ್ಳಿ.

ಈಗಾಗಲೇ ಬೆಂಗಳೂರಿನ ಬಹುತೇಕ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 70 ರಿಂದ 80 ರೂ.ವರೆಗೆ ತಲುಪಿದೆ. ಅಕಾಲಿಕ ಮಳೆ, ಕೆಲವೆಡೆ ಮಳೆಯ ಕೊರತೆಯಿಂದಾಗಿ ಈರುಳ್ಳಿ ಬೆಲೆ ದಿಡೀರ್ ಏರಿಕೆಯಾಗುತ್ತಿದೆ. ಈ ಮೊದಲು ಈರುಳ್ಳಿ 50 ರೂ.ವರೆಗಿತ್ತು. ಆದರೆ ಈಗ ಶತಕದತ್ತ ದಾಪುಗಾಲಿಡುತ್ತಿದೆ.

ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆ ನಾಶವಾಗಿದ್ದರೆ ಮತ್ತೆ ಕೆಲವೆಡೆ ದಾಸ್ತಾನು ಇಟ್ಟಿದ್ದ ಈರುಳ್ಳಿ ಮಳೆಯಿಂದಾಗಿ ಕೊಳೆತು ಹೋಗುತ್ತಿದೆ. ಇದರಿಂದಾಗಿ ನೆರೆ ರಾಜ್ಯ ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿದೆ. ಅಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಆಮದಾಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ.

ಇನ್ನು ಎರಡೇ ದಿನಗಳಲ್ಲಿ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ 100 ರೂ.ಗೆ ಏರಿಕೆಯಾಗಲಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ತಮಿಳುನಾಡಿನಲ್ಲೂ ಇದೇ ಕತೆ. ಅಲ್ಲಿ ಈಗಾಗಲೇ ಈರುಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 100 ರೂ. ತಲುಪಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನಲ್ಲಿ ಅಕಾಲಿಕವಾಗಿ ಮಳೆಯಾಗಿರುವುದೇ ಇದಕ್ಕೆ ಕಾರಣ.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಭ್ರಷ್ಟಾಚಾರ ಮತ್ತೆ ಬಯಲು: 50:50 ಸೈಟು ಅನುಪಾತ ರದ್ದತಿ ನಿರ್ಧಾರದ ಬೆನ್ನಲ್ಲೇ ಕಡತಗಳೇ ನಾಪತ್ತೆ